ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಅಪ್ಪುಗೆ ವಿಶೇಷ ನಮನ

ಮಂಗಳೂರು: ನಟ ಪುನೀತ್ ರಾಜ್‌ಕುಮಾರ್ ಮಣ್ಣಲ್ಲಿ ಮಣ್ಣಾಗಿದ್ದಾರೆ. ಆದ್ರೆ ಪುನೀತ್ ಅಭಿಮಾನಿಗಳು ಈಗಲೂ ತಮ್ಮದೇ ಶೈಲಿಯಲ್ಲಿ ನೆಚ್ಚಿನ ನಟನಿಗೆ ವಿಶೇಷ ನಮನವನ್ನು ಸಲ್ಲಿಸುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಆಳ್ವಾಸ್‌ ಕಾಲೇಜಿನ ವಿಶುವಲ್‌ ಆರ್ಟ್‌ ಪದವಿ ವಿಭಾಗದ ಹಿರಿಯ ವಿದ್ಯಾರ್ಥಿ ತಿಲಕ್‌ ಕುಲಾಲ್‌ ಹಾಗೂ ಕಲಾವಿದರಾದ ರೋಹಿತ್‌ ನಾಯಕ್‌, ಅಕ್ಷಿತ್‌ ಕುಲಾಲ್‌ ಪುನೀತ್ ರಾಜ್‌ಕುಮಾರ್ ಅವರ ವಿಶಿಷ್ಟ ಕಲಾಕೃತಿಯೊಂದನ್ನು ರಚಿಸಿದ್ದಾರೆ.

ಇದ್ದಿಲು, ಮರಳು, ರಂಗೋಲಿ ಹುಡಿ ಬಳಸಿ 30 ಅಡಿ ಉದ್ದ, 30 ಅಡಿ ಅಗಲದ ಪುನೀತ್ ರಾಜ್‌ಕುಮಾರ್ ಅವರ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್‌ ವೇದಿಕೆಯಲ್ಲಿ ಈ ಕಲಾಕೃತಿಯನ್ನು ರಚಿಸಿದ್ದು, ಸುಮಾರು 3 ಗಂಟೆ ಸಮಯದಲ್ಲಿ ಈ ಕಲಾಕೃತಿ ಮೂಡಿಬಂದಿದೆ. 80 ಕೆಜಿ ಇದ್ದಿಲು, 90 ಕೆಜಿ ಮರಳು, ರಂಗೋಲಿ ಹುಡಿಯನ್ನು ಬಳಕೆ ಮಾಡಲಾಗಿದೆ. ಕನ್ನಡದ ಮಹತ್ವ ಸಾರುವ ಹಳದಿ ಕೆಂಪು ಬಣ್ಣದ ಬಾವುಟವನ್ನು ಚಿತ್ರಿಸಿರುವುದು ಸಹ ಗಮನಾರ್ಹವಾಗಿದೆ. ಈಗಾಗಲೇ ಈ ಕಲಾಕೃತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೂ ಇರಿಸಲಾಗಿದೆ.

Edited By : Shivu K
PublicNext

PublicNext

07/02/2022 10:48 am

Cinque Terre

39.5 K

Cinque Terre

1

ಸಂಬಂಧಿತ ಸುದ್ದಿ