ಉಡುಪಿ: ಕೃಷ್ಣನಗರಿಯಲ್ಲಿಅಷ್ಟಮಿ ಹಬ್ಬ ರಂಗೇರುತ್ತಿದೆ. ನಗರದೆಲ್ಲೆಡೆ ಹುಲಿವೇಷಧಾರಿಗಳು ಸಂಚರಿಸಿ ಜನತೆಗೆ ಮನರಂಜನೆ ನೀಡುತ್ತಿದ್ದಾರೆ. ಕೊರಂಗ್ರಪಾಡಿಯ ನೀಲಕಂಠ ಕೊರಗಜ್ಜ ಸನ್ನಿಧಾನದಲ್ಲಿ ನಟ ರಿಷಬ್ ಶೆಟ್ಟಿ ಸಖತ್ ಸ್ಟೆಪ್ಸ್ ಹಾಕಿ ಗಮನಸೆಳೆಸಿದ್ದಾರೆ. ರಿಷಬ್, ಕೊರಗಜ್ಜ ದೈವದ ಭಕ್ತರೂ ಹೌದು.
ಇಂದು ಇಲ್ಲಿಗೆ ಆಗಮಿಸಿದ್ದ ಈ ನಟ, ಜ್ಯೂನಿಯರ್ ಫ್ರೆಂಡ್ಸ್ ತಂಡದ ಜೊತೆ ಹುಲಿಕುಣಿತ ಮಾಡಿ ಖುಷಿಪಟ್ಟರು. ಗಮನಾರ್ಹ ಸಂಗತಿ ಅಂದ್ರೆ "ಉಳಿದವರು ಕಂಡಂತೆ" ಸಿನೆಮಾದಲ್ಲಿ ಇದೇ ತಂಡ ಹುಲಿವೇಷ ಹಾಕಿ ಕುಣಿದಿತ್ತು.
PublicNext
19/08/2022 08:15 pm