ಮುಲ್ಕಿ: ಮುಲ್ಕಿ ವ್ಯಾಪ್ತಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆದಿದೆ. ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಂದಿ ಫ್ರೆಂಡ್ಸ್ ವತಿಯಿಂದ ನಡೆದ ಮೊಸರು ಕುಡಿಕೆಯಲ್ಲಿ ನಾಯಕ ಅರ್ಜುನ್ ಕಾಪಿಕಾಡ್ ಚಿತ್ರತಂಡ ದೊಂದಿಗೆ ಭಾಗವಹಿಸಿ ಸ್ವತ: ಮಡಕೆ ಒಡೆದು ಸಂಭ್ರಮಿಸಿದರು.
ಈ ಸಂದರ್ಭ ಅಭಿಮಾನಿಗಳು ಚಿತ್ರ ನಟನ ಜೊತೆ ಸೆಲ್ಫಿಗಾಗಿ ಮುಗಿದಿದ್ದರು. ಸಭಾ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಕಾಪಿಕಾಡ್ ಮಾತನಾಡಿ ತುಳು ಚಿತ್ರಕ್ಕೆ ಚಿತ್ರ ಪ್ರೇಮಿಗಳು ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು. ವಿವಿಧ ವೇಷ ಭೂಷಣ ಬಿರುದಾವಳಿಗಳೊಂದಿಗೆ ಎಸ್.ಕೋಡಿ ಬಳಿಯಿಂದ ಶ್ರೀ ವಿಶ್ವನಾಥ ದೇವಸ್ಥಾನದವರೆಗೆ ಸಂಘಟನೆಗಳ ಸಹಭಾಗಿತ್ವದಲ್ಲಿ ಮಡಕೆ ಒಡೆಯುವ ಮೂಲಕ ಸಂಭ್ರಮಿಸಿದ್ರು.
ಉಳಿದಂತೆ ಶಿಮಂತೂರು,ಕಾರ್ನಾಡ್ ಧರ್ಮಸ್ಥಾನ, ಕಟೀಲು ದೇವಸ್ಥಾನ, ಪಾವಂಜೆ ದೇವಸ್ಥಾನಗಳಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು.
Kshetra Samachara
19/08/2022 08:09 pm