ಅಲೆವೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇವತ್ತು ಹುಟ್ಟೂರು ಅಲೆವೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಾರೆ. ಗುಡ್ಡೆಯಂಗಡಿ ಜಂಕ್ಷನ್ ನಲ್ಲಿ ಕಳೆದ 37 ವರ್ಷಗಳಿಂದ ಗಣಪತಿ ವಿಗ್ರಹ ಇಟ್ಟು ಪೂಜಿಸಲಾಗುತ್ತದೆ. ರಕ್ಷಿತ್ ಶೆಟ್ಟಿ ರಾತ್ರಿ ತಂದೆ ತಾಯಿ ಅಣ್ಣ ಅತ್ತಿಗೆ ಮತ್ತು ಮಕ್ಕಳ ಜೊತೆ ಆಗಮಿಸಿ ದೇವರ ದರ್ಶನ ಪಡೆದರು.ರಕ್ಷಿತ್ ಶೆಟ್ಟಿ ಕುಟುಂಬದ ವತಿಯಿಂದ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆಯಾಯಿತು.
ರಕ್ಷಿತ್ ಶೆಟ್ಟಿ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ರಕ್ಷಿತ್ ಕುಟುಂಬ ಅಲೆವೂರು ಕಟ್ಟೆ ಗಣಪತಿಯ ಪ್ರಸಾದ ಸ್ವೀಕರಿಸಿದರು. "ಲೆಟ್ಸ್ ಕಿಲ್ ಗಾಂಧಿ "ಎಂಬ ಕಿರುಚಿತ್ರದ ಮೂಲಕ ರಕ್ಷಿತ್ ಬಣ್ಣದ ಬದುಕನ್ನು ಆರಂಭ ಮಾಡಿದ್ದರು. ಆ ಸಂದರ್ಭ ಅಲೆವೂರು ಕಟ್ಟೆ ಗಣಪತಿ ಗುಡಿಯಲ್ಲೇ ಮೊದಲ ಪೂಜೆ ಸಲ್ಲಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
11/09/2021 10:09 pm