ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋಸ್ಟಲ್ ವುಡ್ ನಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ 'ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್'

ವರದಿ: ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು

ಮಂಗಳೂರು: 'ಒಂದು ಮೊಟ್ಟೆಯ ಕಥೆ' ಸ್ಯಾಂಡಲ್ ವುಡ್ ನಲ್ಲೇ ತೆರೆಕಂಡ ವಿಭಿನ್ನ ಚಿತ್ರ. ಅದೇ ಸಿನಿಮಾ ತಂಡ ಇದೀಗ ತುಳು ಚಿತ್ರರಂಗದಲ್ಲಿ ಇನ್ನೊಂದು ಡಿಫರೆಂಟ್ ಸಿನಿಮಾಕ್ಕೆ ಕೈ ಹಾಕಿದೆ. ಸಿನಿಮಾದ ಹೆಸರೇ ತುಂಬಾ ಮಜಾಯೆನಿಸಿದೆ. 'ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್' ಅನ್ನೋ ಹೆಸರಿನ ಮೂಲಕ ತೆರೆ ಮೇಲೆ ಬರೋದಕ್ಕೆ ಸಿನಿಮಾ ಸಿದ್ಧವಾಗುತ್ತಿದೆ.

ವಿನೀತ್ ಕುಮಾರ್ ಮತ್ತೊಮ್ಮೆ ನಾಯಕ ನಟನಾಗಿ ಈ ಸಿನಿಮಾ ಮೂಲಕ ಭವಿಷ್ಯ ಅರಸಿ ಹೊರಟಿದ್ದಾರೆ. ಕಾಮಿಡಿ ಪ್ರೀಮಿಯರ್ ಲೀಗ್ ಸಹಿತ ಹಲವು ಸ್ಟೇಜ್ ಶೋ ಗಳಲ್ಲಿ ತನ್ನದೇ ಆದ ಶೈಲಿಯ ನಿರೂಪಣೆಯಲ್ಲಿ ಮನೆ ಮಾತಾಗಿರುವ ಕುಡ್ಲದ ಸ್ಟಾರ್ ನಿರೂಪಕ. ಹಾಗಂತ ನಾಯಕನಾಗಿ ಕೋಸ್ಟಲ್ ವುಡ್ ನಲ್ಲಿ ಅಷ್ಟಾಗಿ ಮಿಂಚಲು ಸಾಧ್ಯವಾಗಿಲ್ಲ.

ಆದರೆ ಇಲ್ಲಿ 'ಒಂದು ಮೊಟ್ಟೆಯ ಕಥೆಯ' ಕೃಪಾಕಟಾಕ್ಷ ವಿನೀತ್ ಲಕ್ ಬದಲಾಯಿಸೋ ಜೊತೆಗೆ ಸುಲಭವಾಗಿ ಸಿನಿಮಾದ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಈಗಾಗಲೇ ಫೇಸ್ಬುಕ್, ಯೂಟ್ಯೂಬ್ ಗಳಲ್ಲಿ ಮೇಕಿಂಗ್ ವೀಡಿಯೊ ಹರಿಯಬಿಟ್ಟಿರುವ ಸಿನಿಮಾ ತಂಡ, 'ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್' ತುಂಬೆಲ್ಲ ಕಾಮಿಡಿಯೇ ಇದೆ ಅನ್ನೋ ಸೀಕ್ರೆಟ್ ಸುಲಭವಾಗಿ ಬಿಟ್ಟುಕೊಟ್ಟಿದೆ.

ಇಲ್ಲೂ 'ಗಿರಿಗಿಟ್', 'ಗಮ್ಜಾಲ್' ಸಿನಿಮಾ ಸಂಭಾಷಣೆಕಾರ ಪ್ರಸನ್ನ ಶೆಟ್ಟಿ ಬೈಲೂರು ಡೈಲಾಗ್ ಜವಾಬ್ದಾರಿ ವಹಿಸಿದ್ದಾರೆ. 'ಏಸ', 'ಸೂಂಬೆ' ನಾಯಕನಟ ರಾಹುಲ್ ಅಮೀನ್ ಇಲ್ಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ವೈಭವ್ ಫಿಕ್ಸ್ ಬ್ಯಾನರ್ ನಡಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾಕ್ಕೆ ಆನಂದ್ ಎನ್. ಹಾಗೂ ಸಹ ನಿರ್ಮಾಪಕರಾಗಿ ಹಲವು ಮಂದಿ ಬಂಡವಾಳ ಹೂಡಿದ್ದಾರೆ.

ನಾಯಕ ನಟ ವಿನೀತ್ ಕುಮಾರ್ ಕಥೆ ಜೊತೆಗೆ ರಾಹುಲ್ ಅಮೀನ್ ಜೊತೆ ಸೇರಿ ಚಿತ್ರಕಥೆಯನ್ನೂ ರಚಿಸಿದ್ದಾರೆ. ಸೃಜನ್ ಕುಮಾರ್ ಸಂಗೀತ ಸಂಯೋಜನೆ, ವಿಷ್ಣು ಪ್ರಸಾದ್ ಮತ್ತು ಜೇಕಬ್ ಜಾನ್ಸನ್ ಕ್ಯಾಮೆರಾ ಕೈಚಳಕ ಮೆರೆದಿದ್ದಾರೆ. ಕರೀಷ್ಮಾಅಮೀನ್, ಯಶ ಶಿವಕುಮಾರ್ ನಾಯಕ ನಟಿಯರಾದರೆ, ಸ್ಟಾರ್ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಸತೀಶ್ ಬಂದಲೆ ಮುಂತಾದವರ ತಾರಾಗಣವಿದೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಎಲ್ಲವೂ ಅಂದುಕೊಂಡಂತಾದರೆ 'ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್' ಮುಂದಿನ ವರ್ಷ ಸದ್ದು ಮಾಡೋದರಲ್ಲಿ ಸಂಶಯವಿಲ್ಲ.

Edited By : Manjunath H D
Kshetra Samachara

Kshetra Samachara

23/11/2020 02:08 pm

Cinque Terre

15.98 K

Cinque Terre

2

ಸಂಬಂಧಿತ ಸುದ್ದಿ