ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಸಿಹಿತ್ಲು: ಸಾಧಕ ಕಲಾವಿದರಿಗೆ ಸ್ನೇಹ ಹಸ್ತ

ಮುಲ್ಕಿ:ಕೊರೊನಾ ಲಾಕ್ ಡೌನ್ ಸಂದಿಗ್ದ ಪರಿಸ್ಥಿತಿಯಲ್ಲಿ ಸಂಸ್ಕೃತಿ ಸಂಸ್ಕಾರ ಹಾಗೂ ಧಾರ್ಮಿಕತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿರುವ ಕಲಾವಿದರ ಕಷ್ಟವನ್ನು ಅರಿತು ಸಹಕರಿಸುವ ಕಾರ್ಯ ಅರ್ಥಪೂರ್ಣ ಎಂದು ಗುಜರಾತ್ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ಮೋಹನ ಪೂಜಾರಿ ಹೇಳಿದರು

ಕಲಾ ಸೌರಭ ಮುಂಬೈ ಸಾರಥ್ಯದಲ್ಲಿ,ರಂಗ ಸುದರ್ಶನ (ರಿ) ಸಸಿಹಿತ್ಲು ಸಹಯೋಗದಲ್ಲಿ,ಬಿಲ್ಲವರ ಹಿತವರ್ಧಕ ಸಂಘ ಮುಂಬೈ ಸಮಿತಿಯ ಸಹಕಾರದಲ್ಲಿ,ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಕೃಪಾಶ್ರಯದಲ್ಲಿ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.

ಸಸಿಹಿತ್ಲು ಭಗವತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಗವತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ವಾಮನ ಇಡ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಮುಲುಂದ್ ಸಮಿತಿಯ ಕಾರ್ಯಾಧ್ಯಕ್ಷರಾದ ಕದ್ರಿ ಸುರೇಶ ಕುಮಾರ್,ಸಮಾಜ ಸೇವಕ ಸುರೇಶ ಕುಲಶೇಖರ,ಯುವವಾಹಿನಿ ವಿದ್ಯಾನಿಧಿ ಟ್ರಸ್ಟಿನ ನಿರ್ದೇಶಕ ವಾಸು ಪೂಜಾರಿ ಚಿತ್ರಾಪು,ಉದ್ಯಮಿ ಉಮೇಶ ಸಾಲಿಯಾನ್,ಸಂಗೀತ ನಿರ್ದೇಶಕರಾದ ಶೇಕರ ಸಾಲಿಯಾನ್ ಮತ್ತು ಸತೀಶ್ ಸುರತ್ಕಲ್ , ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಅಧ್ಯಕ್ಷ ಜಗನ್ನಾಥ ಕೋಟ್ಯಾನ್ , ಹಳೆಯಂಗಡಿ ಗ್ರಾ ಪಂ. ಉಪಾಧ್ಯಕ್ಷ ಅಶೋಕ ಬಂಗೇರ ಉಪಸ್ಥಿತರಿದ್ದರು.

ಕಲಾ ಸೌರಭ ಮುಂಬೈ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಸ್ವಾಗತಿಸಿದರು.ಸಂಘಟಕ,ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.ರಂಗ ಸುದರ್ಶನ ನಿರ್ದೇಶಕ ಪರಮಾನಂದ.ವಿ.ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

ಸಸಿಹಿತ್ಲು ಭಗವತಿ ಯಕ್ಷಗಾನ ಕಲಾ ಮಂಡಳಿಯ ಸರ್ವ ಕಲಾವಿದರಿಗೆ ಮತ್ತು ಇತರ ಸಾಂಸ್ಕೃತಿಕ ಕಲಾವಿದರಿಗೆ ಸಹಾಯ ಹಸ್ತ ನೀಡಲಾಯಿತು.ಕಾರ್ಯಕ್ರಮದ ಮೊದಲು ಕಲಾವಿದರಿಂದ ಭಕ್ತಿ ಭಜನೆ ನಡೆಯಿತು.

Edited By : PublicNext Desk
Kshetra Samachara

Kshetra Samachara

12/08/2021 11:36 am

Cinque Terre

5.79 K

Cinque Terre

0