ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಿನ್ನಿಗೋಳಿ ಚರ್ಚ್‌ನಲ್ಲಿ ಕೋವಿಡ್ ಲಸಿಕಾಭಿಯಾನ

ಮುಲ್ಕಿ: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಬಾಂಧವರು ಕೋವಿಡ್ ಲಸಿಕೆ ಪಡೆಯುವಲ್ಲಿ ಹಿಂಜರಿಯದೆ ಲಸಿಕೆ ಪಡೆದು ಸುರಕ್ಷಿತರಾಗಿದ್ದು ಸರ್ಕಾರದ ಆದೇಶ ಪಾಲನೆ ಮಾಡಲು ಸಹಕಾರ ನೀಡಬೇಕೆಂದು ಕಿನ್ನಿಗೋಳಿ ಕೊಸೆಸಾಂವ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಮಾಥ್ಯುವಾಸ್ ಹೇಳಿದರು.

ಕಿನ್ನಿಗೋಳಿ ಚರ್ಚ್‌ನಲ್ಲಿ ಭಾನುವಾರ ಜರಗಿದ "ಮಿಶನ್ ವ್ಯಾಕ್ಷಿನೆಶನ್" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಆಗಸ್ತ್ 1 ರಿಂದ 31 ರ ತನಕ ಒಂದು ತಿಂಗಳನ್ನು ವಾಕ್ಷಿನೆಶನ್ ಮಾಸ ಎಂದು ಪರಿಗಣಿಸಿ ಚರ್ಚ್ ವ್ಯಾಪ್ತಿಯ ಸಮಾಜದ ಜನರಿಗೆ ಕೋವಿಡ್ ಜಾಗೃತಿ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ , ಸಹಾಯಕ ಧರ್ಮಗುರು ಫಾ| ವಿಲಿಯಂ ಡಿಸೋಜ, ಚರ್ಚ್ ಶಾಲೆಯ ಪ್ರಾಚಾರ್‍ಯ ಫಾ| ಲ್ಯಾನ್ಸಿ ಸಲ್ದಾನಾ , ಕಾರ್ಯದರ್ಶಿ ವಿನ್ಸಂಟ್ ಮಥಾಯಸ್, ಮರ್ವಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/08/2021 07:48 pm

Cinque Terre

9.58 K

Cinque Terre

0