ಕೋವಿಡ್ ನಿಯಂತ್ರಣ ಆಗಬೇಕಾದರೆ ಎಲ್ಲರಿಗೂ ವ್ಯಾಕ್ಸಿನೇಷನ್‌ ಆಗಬೇಕು: ಅಪರ ಜಿಲ್ಲಾಧಿಕಾರಿ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ​ಉಡುಪಿ ವಲಯದ ಸದಸ್ಯರಿಗೆ ​ಮಣಿಪಾಲ ಮಾಧವ ಕೃಪಾ ಶಾಲೆಯಲ್ಲಿ ಏರ್ಪಡಿಸಿದ್ದ ಕೋವಿಡ್ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ​ಉಡುಪಿ ಜೆಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಬೇಟಿ ನೀಡಿದರು.

ಕೋವಿಡ್ ನಿಯಂತ್ರಣ ಆಗಬೇಕಾದರೆ ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್‌ ಆಗಬೇಕು.​ ಈ ನಿಟ್ಟಿನಲ್ಲಿ ಹಂತಹಂತವಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕೆಲಸ ಆರೋಗ್ಯ ಇಲಾಖೆಯಿಂದ ಆಗುತ್ತಿದೆ.​ ಯಾವುದೇ ಗೊಂದಲ ಬೇಡ,​ ​ಲಸಿಕೆ ಲಭ್ಯವಿರುವ ಸಮಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಲಸಿಕೆ ಪಡೆದು ಕೋವಿಡ್ ನಿಯಂತ್ರಣಕ್ಕಾಗಿ ಸಹಕಾರ ನೀಡಬೇಕು ಎಂದು ​ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಈ‌​ ​ಸಂದರ್ಭದಲ್ಲಿ ​ಉಡುಪಿ ವಲಯ ಅಧ್ಯಕ್ಷ ​ಪ್ರಕಾಶ್ ಕೊಡಂಕೂರ್, ಕಾರ್ಯದರ್ಶಿ ​ಸುಕೇಶ್ ಅಮೀನ್ ,​ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಆಸ್ಟ್ರೋ ಮೋಹನ್, ಭಾರತಿ ಭಾಸ್ಕರ್, ಮಹೇಶ್ ಸುವರ್ಣ, ರಂಜಿತ್ ಕೊಡವೂರು, ರಾಘವೇಂದ್ರ ನಾಯಕ್, ಮಿತ್ರ ಕುಮಾರ್ ಉಪಸ್ಥಿತರಿದ್ದರು.

Kshetra Samachara

Kshetra Samachara

1 month ago

Cinque Terre

7.64 K

Cinque Terre

0