ಮುಲ್ಕಿ: ಕಳೆದ ಕೆಲವು ದಿನಗಳಿಂದ ಮುಲ್ಕಿ ಪರಿಸರದಲ್ಲಿ ಬಂಗುಡೆ ಮೀನು ಹೇರಳವಾಗಿ ಅಗ್ಗದಲ್ಲಿ ಮಾರಾಟವಾಗುತ್ತಿದ್ದು ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.
ನೂರು ರೂಪಾಯಿಗೆ 25 ರಿಂದ 30 ರವರೆಗೆ ಬಂಗುಡೆ ಮೀನು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತಿದೆ. ಮುಲ್ಕಿ ಬಸ್ಸು ನಿಲ್ದಾಣದ ಬಳಿ ಸಂಜೆ ಹೊತ್ತು ಗ್ರಾಹಕರು ಎಗ್ಗಿಲ್ಲದೆ ಮೀನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು. ಒಂದು ಹಂತದಲ್ಲಿ ಮೀನು ಖರೀದಿಸಲು ನೂಕು ನುಗ್ಗಲು ಉಂಟಾಗಿತ್ತು.
ಈ ನಡುವೆ ಮಾರಾಟಗಾರರ ಮೀನಿನ ವಾಸನೆಯುಕ್ತ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಗರ ಪಂಚಾಯಿತಿಗೆ ದೂರು ನೀಡಿದ ಕಾರಣ ನಪಂ. ಸಿಬ್ಬಂದಿ ಮೀನು ಮಾರಾಟಗಾರರನ್ನು ತರಾಟೆಗೆ ತೆಗೆದುಕೊಂಡು ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ್ದಾರೆ.
Kshetra Samachara
12/10/2022 09:43 pm