ಉಡುಪಿ: ನವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಪೇಟೆಂಟ್ ಪಡೆದ ಉಡುಪಿಯ ಶಂಕರಪುರ ಮಲ್ಲಿಗೆ ದರದಲ್ಲಿ ಕುಸಿತ ಕಂಡಿದೆ.
ನವರಾತ್ರಿ ಸಂದರ್ಭದಲ್ಲಿ ಭಾರೀ ಬೇಡಿಕೆ ಇದ್ದ ಶಂಕರಪುರ ಮಲ್ಲಿಗೆ ದರ ಅಟ್ಟಿಗೆ 400 ರೂ. ಹಾಗೂ ಜಾಜಿ ಹೂವಿನ ದರ ಅಟ್ಟಿಗೆ 20 ರೂ.ನಷ್ಟು ಇಳಿಕೆಯಾಗಿದೆ. ನವರಾತ್ರಿ ಹಬ್ಬ ಮುಗಿದು ದೀಪಾವಳಿ ದಿನಗಳಿಗೆ ಇನ್ನೆರಡು ವಾರವಿರುವ ಹಿನ್ನೆಲೆಯಲ್ಲಿ ಮಲ್ಲಿಗೆ, ಜಾಜಿ ಹೂವಿನ ದರ ಕುಸಿದಿದ್ದು, ಶಂಕರಪುರ ಮಲ್ಲಿಗೆ ದರ ಅಟ್ಟಿಗೆ ನವರಾತ್ರಿ ಸಂದರ್ಭ 1,700 ರೂ.ತನಕ ಮಾರಾಟವಾಗುತ್ತಿತ್ತು. ಸದ್ಯ 1,300 ರೂ.ಗಳಿಗೆ ಇಳಿಕೆ ಕಂಡಿದೆ. ಜಾಜಿ ಹೂ ಅಟ್ಟಿಗಿದ್ದ 380 ರೂ. ದರ, ಸದ್ಯ 360 ರೂ.ಗಳಿಗೆ ಕುಸಿದಿದೆ.
Kshetra Samachara
08/10/2022 07:21 pm