ಮಂಗಳೂರು: ಸಾಂಪ್ರದಾಯಿಕ ಶೈಲಿಯ, ಹ್ಯಾಂಡ್ ಮೇಡ್ ಜ್ಯುವೆಲ್ಲರಿಗೆ ನಗರದ ಎಸ್.ಎಲ್.ಶೇಟ್ ಜ್ಯುವೆಲ್ಲರಿ ಪ್ರಸಿದ್ಧ. ಸಾಂಪ್ರದಾಯಿಕ ಶೈಲಿಯ ಆಧುನಿಕ ಒಡವೆಗಳಿಂದಲೇ ಆಭರಣಪ್ರಿಯರ ಮನಸ್ಸನ್ನು ಗೆದ್ದಿರುವ ಈ ಜ್ಯುವೆಲ್ಲರಿ ಮಂಗಳೂರಿನ ಹೃದಯಭಾಗವಾದ ಸಿಟಿ ಸೆಂಟರ್ ರಸ್ತೆಯಲ್ಲಿ ಸುಸಜ್ಜಿತ ಮಳಿಗೆಯನ್ನು ಹೊಂದಿದೆ.
ಎಸ್.ಎಲ್.ಶೇಟ್ ಜ್ಯುವೆಲ್ಲರಿ ಆ್ಯಂಟಿಕ್ ಪೀಸ್ ಒಡವೆಗಳು, ಕೈಕುಸುರಿಯ ಪುರಾತನ ಶೈಲಿಯ ಆಭರಣಗಳನ್ನು ಕಳೆದ 75 ವರ್ಷಗಳಿಂದ ನೀಡುತ್ತಾ ಬಂದಿದ್ದು, ಈಗಲೂ ತನ್ನ ಬ್ರ್ಯಾಂಡ್ ನಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಯಾವುದೇ ಮಾದರಿಯ ಆಭರಣಗಳನ್ನು ಆರ್ಡರ್ ಪಡೆದು ಮಾಡಿಕೊಡುವಲ್ಲಿಯೂ ಹೆಗ್ಗಳಿಕೆಯನ್ನು ಪಡೆದಿದೆ. ಎಸ್.ಎಲ್.ಶೇಟ್ ಜ್ಯುವೆಲ್ಲರಿ ಮಾಲಕ ಪ್ರಶಾಂತ್ ಶೇಟ್ ಅವರು ವಿವಿಧ ರೀತಿಯ ಸ್ಟೋನ್ ಗಳ ಗುಣಮಟ್ಟವನ್ನು ಗುರುತಿಸುವುದರಲ್ಲಿ ಸಿದ್ಧಹಸ್ತರು.
ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಸಣ್ಣ ಮಳಿಗೆಯ ಮೂಲಕ ಆರಂಭವಾದ ಈ ಜ್ಯುವೆಲ್ಲರಿ ಇಂದು ಬೃಹತ್ ಮಳಿಗೆಯನ್ನು ಹೊಂದಿದೆ. ಈ ಸುಸಜ್ಜಿತ ಮಳಿಗೆಯಲ್ಲಿ ಸಾಕಷ್ಟು ಉದ್ಯೋಗಿಗಳಿದ್ದರೂ ಈಗಲೂ ಇಲ್ಲಿನ ಮಾಲಕರು ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ದಸರಾ ನಿಮಿತ್ತ ಎಸ್.ಎಲ್.ಶೇಟ್ ತನ್ನೆಲ್ಲಾ ಗ್ರಾಹಕರಿಗೆ ಶುಭಾಶಯವನ್ನು ಕೋರಿದೆ.
PublicNext
30/09/2022 08:45 pm