ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಗೆ, ವಿಐಪಿಗಳಿಗೆ ಹಾಗೂ ಬೆಳ್ತಂಗಡಿಯ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ರುಚಿಕಟ್ಟಾದ ಆಹಾರವನ್ನು ಪೂರೈಕೆ ಮಾಡುವುದರೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಉಜಿರೆಯಲ್ಲಿ ಓಶಿಯನ್ ಪರ್ಲ್ ಹೊಟೇಲ್ ಸೆ.30ರಂದು ಲೋಕಾರ್ಪಣೆಗೊಳ್ಳಲಿದೆ.
3 ಮಹಡಿಗಳ ಐಷಾರಾಮಿ ಈ ಓಶಿಯನ್ ಪರ್ಲ್ ಹೊಟೇಲ್ ನಲ್ಲಿ 34 ಲಕ್ಷುರಿ ಕೊಠಡಿಗಳಿವೆ. 500 ರಿಂದ 600 ಅತಿಥಿಗಳು ಆಸೀನರಾಗಬಹುದಾದ 2 ಬ್ಯಾಂಕ್ವೆಟ್ ಹಾಲ್ ಹಾಗೂ 2 ರೆಸ್ಟೋರೆಂಟ್ ಗಳಿವೆ. ಅಲ್ಲದೆ ದೇಹದಾರ್ಡ್ಯತೆ ಪ್ರಿಯರಿಗೆ ಜಿಮ್ ಸೌಲಭ್ಯವೂ ಉಂಟು. .
ಹೊಟೇಲ್ ದಿಗ್ಗಜರಾದ ಜಯರಾಂ ಬನಾನ್ ಹಾಗೂ ಶಶಿಧರ್ ಶೆಟ್ಟಿಯವರ ಪರಿಶ್ರಮದಿಂದ ಓಶಿಯನ್ ಪರ್ಲ್ ಹೊಟೇಲ್ ತನ್ನ ಶಾಖೆಗಳನ್ನು ವಿಸ್ತರಿಸುತ್ತಿದೆ. ಅದರ ಭಾಗವಾಗಿ ಇದೀಗ 4ನೇ ಶಾಖೆಯು ದಸರಾ ಹಬ್ಬದ ಪರ್ವ ಕಾಲದಲ್ಲಿ ಉಜಿರೆಯಲ್ಲಿ ಆರಂಭವಾಗುತ್ತಿದೆ. ಈ ಮೂಲಕ ಓಶಿಯನ್ ಪರ್ಲ್ ಹೊಟೇಲ್ ಆಡಳಿತ ಮಂಡಳಿ ಗ್ರಾಹಕರಿಗೆ ದಸರಾ ಮಹೋತ್ಸವದ ಶುಭಾಶಯವನ್ನು ಕೋರಿದೆ.
PublicNext
29/09/2022 02:35 pm