ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಸೆ.30ರಂದು ಉಜಿರೆಯಲ್ಲಿ ಓಶಿಯನ್ ಪರ್ಲ್ ಹೋಟೆಲ್‌ ನ 4ನೇ ಶಾಖೆ ಆರಂಭ

ಬೆಳ್ತಂಗಡಿ: ಅಥಿತಿ ಸೇವೆಗೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾಗಿರುವ ಓಶಿಯನ್ ಪರ್ಲ್ ಹೋಟೆಲ್‌ ಸೆ.30ರಂದು ಉಜಿರೆಯಲ್ಲಿ ತನ್ನ 4ನೇ ಶಾಖೆಯನ್ನು ತೆರೆಯಲಿದೆ. ಅಂದು ಬೆಳಗ್ಗೆ 10.20 ಗಂಟೆಗೆ 'ದಿ ಓಶಿಯನ್ ಪರ್ಲ್ ಕಾಶಿ ಪ್ಯಾಲೇಸ್' ಹೊಟೇಲ್ ಅನ್ನು ಸಂಸ್ಥೆಯ ಮಾಲಕ ಶಶಿಧರ ಶೆಟ್ಟಿಯವರ ತಾಯಿ ಕಾಶಿ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ.

ಹೋಟೆಲ್ ಉದ್ಯಮ ಕ್ಷೇತ್ರದ ಜಂಟಿ ದಿಗ್ಗಜರಾದ ಜಯರಾಂ ಬನಾನ್ ಹಾಗೂ ಶಶಿಧರ ಶೆಟ್ಟಿಯವರ ಸಾಕಷ್ಟು ವರ್ಷಗಳ ಸಂಯೋಜಿತ ಅನುಭವದೊಂದಿಗೆ ಓಶಿಯನ್ ಪರ್ಲ್ ಕಾಶಿ ಪ್ಯಾಲೇಸ್ ಹೋಟೆಲ್ ಉಜಿರೆಯಲ್ಲಿ ತಲೆಯೆತ್ತಲಿದೆ. ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ, ವಿಐಪಿಗಳಿಗೆ ಉತ್ತಮ ವ್ಯವಸ್ಥೆಯನ್ನು ಈ ಹೋಟೆಲ್ ಒದಗಿಸಲಿದೆ. ಈ ಹೋಟೆಲ್ ನಲ್ಲಿ 34 ಲಕ್ಷುರಿ ರೂಂಗಳು, 500-600 ಮಂದಿ ಕುಳಿತುಕೊಳ್ಳುವ 2 ಬ್ಯಾಂಕ್ವೆಟ್ ಹಾಲ್ ಗಳು, 2 ಹೊಟೇಲ್ ಗಳು, ಜಿಮ್ ಗಳನ್ನು ಒಳಗೊಂಡಿದೆ.

ಓಶಿಯನ್ ಪರ್ಲ್ ಹೊಟೇಲ್ ನ ವೈಸ್ ಪ್ರೆಸಿಡೆಂಟ್ ಗಿರೀಶ್ ಎನ್. ಮಾತನಾಡಿ, ಮೂಲತಃ ಬೆಳ್ತಂಗಡಿಯವರಾದ ಶಶಿಧರ ಶೆಟ್ಟಿಯವರಿಗೆ ತಮ್ಮ ಊರಿನಲ್ಲಿಯೇ ಅಂತಾರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ ಆರಂಭಿಸಬೇಕೆಂಬ ಅಭಿಲಾಷೆ ಇದೆ. ಸದ್ಯ ಅವರು ಉಜಿರೆಯಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ. ಸ್ಥಳೀಯ ಜನರಿಗೆ ಉದ್ಯೋಗ ಕೊಡುವ ಉದ್ದೇಶವೂ ಇದೆ. ಅಲ್ಲದೆ ಬೆಳ್ತಂಗಡಿಯ ಜನತೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಲಕ್ಷುರಿ ರೀತಿಯ ಆಹಾರ ಇಲ್ಲಿ ಒದಗಿಸಲಾಗುತ್ತದೆ ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

28/09/2022 06:38 pm

Cinque Terre

15.81 K

Cinque Terre

0