ಬಾರಕೂರು: ಬಾರಕೂರು ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆ ಸೋಮವಾರ ಕಚ್ಚೂರು ಎನ್ ಕ್ಲೇವ್ ಕಾಂಪ್ಲೆಕ್ಸ್ ಮಹಡಿಯಲ್ಲಿ ಆರಂಭಗೊಂಡಿತು.
ಬಾರಕೂರಿನ ಉದ್ಯಮಿ ಗಣಪತಿ ಕಾಮತ್ ದೀಪ ಬೆಳಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಲೆಕ್ಕ ಪರಿಶೋಧಕ ಪದ್ಮನಾಭ್ ಕಾಂಚನ್ ಮಾತನಾಡಿ ದೇಶಕ್ಕೆ ಇಂದು ಸಹಕಾರಿ ಸಂಸ್ಥೆಗಳು ಹೆಚ್ಚು ಅಗತ್ಯವಾಗಿದೆ. ಸ್ಥಳೀಯ ಜನಸಾಮಾನ್ಯರ ಬದುಕನ್ನು ಕಂಡುಕೊಂಡ ಸಹಕಾರಿ ಆರ್ಥಿಕ ಸಂಸ್ಥೆಗಳು ಜನರಿಂದ ಜನರಿಗಾಗಿ ಎನ್ನುವ ತತ್ವದೊಂದಿಗೆ ತ್ವರಿತ ಸೇವೆ ನೀಡಿದಲ್ಲಿ ಬೆಳವಣಿಗೆ ಸಾಧ್ಯ ಎಂದರು.
ಬಾರಕೂರು ಶಾಂತಾರಾಮ ಶೆಟ್ಟಿ, ಶ್ರೀನಿವಾಸ ಶೆಟ್ಟಿಗಾರ್, ಸ್ಟ್ಯಾನಿ ಪಾಯಸ್, ಶೌಖತ್ ಆಲಿ, ರಮೇಶ್ ಭಂಡಾರಿ ಪಾಂಗಾಳ , ಶರತ್ ಆಚಾರ್ಯ ಯಡ್ತಾಡಿ , ಉದಯ ಮೂಡ್ಲಕಟ್ಟೆ , ಅಶೋಕ್ ಕುಮ್ರಗೋಡು ಮತತು ನಿರ್ದೇಶಕರು ಉಪಸ್ಥಿತರಿದ್ದರು. ಠೇವಣಿದಾರರನ್ನು, ಗ್ರಾಹಕರನ್ನು ಮತ್ತು ಸಂಸ್ಥೆಗೆ ಸಹಕರಿಸಿದವರನ್ನು ಗೌರವಿಸಲಾಯಿತು.
Kshetra Samachara
27/09/2022 09:30 pm