ಉಡುಪಿ: ಕರಾವಳಿಯ ಹೊಸ ಮೀನುಗಾರಿಕಾ ಋತು ಶುಭಾರಂಭಗೊಂಡಿದೆ. ಮತ್ಸ್ಯ ಪ್ರಿಯರ ಬಾಯಲ್ಲಿ ನೀರೂರಿಸುವಂತೆ ಭರ್ಜರಿ ಮೀನು ಬರುತ್ತಿದೆ. ಕಳೆದ ವರ್ಷ ಆರಂಭದಲ್ಲಿ ನಾನಾ ಕಾರಣಗಳಿಂದ ಆರಂಭದಲ್ಲಿ ತೊಡಕು ಉಂಟಾಗಿತ್ತು. ಆದರೆ ಈ ಬಾರಿ ಆರಂಭದಲ್ಲೇ ಉತ್ತಮ ಫಿಶಿಂಗ್ ನಡೆಯುತ್ತಿದೆ. ಟ್ರಾಲ್‌ಬೋಟ್‌ನವರಿಗೆ ಕಪ್ಪೆ ಬೊಂಡಾಸ್, ಕೋಲು ಬೊಂಡಾಸ್, ರಾಣಿ ಫಿಶ್ ಮೊದಲಾದ ವಿದೇಶಕ್ಕೆ ರಫ್ತಾಗುವ ಮೀನುಗಳು ಹೇರಳವಾಗಿ ಲಭಿಸಿವೆ.
ಪರ್ಶಿಯನ್ ಬೋಟ್‌ಗಳಿಗೂ ಇಳುವರಿ ಉತ್ತಮವಾಗಿದೆ. ಮೀನು ಪ್ರಿಯರಿಗೆ ಸ್ಥಳೀಯವಾಗಿ ಅಗ್ಗದ ದರದಲ್ಲಿ ಹಲವು ಬಗೆಯ ಮೀನುಗಳಾದ ಬೂತಾಯಿ, ಬಂಗುಡೆ ಡಿಸ್ಕೋ ಮೀನುಗಳು ಸಿಗಲಾರಂಭಿಸಿವೆ. ಮೀನುಗಳು ಹೆಚ್ಚಿನ ಸಿಗುವ ಕಾರಣ ಮೀನಿನ ದರವೂ ಸ್ವಲ್ಪ ಕಡಿಮೆಯಾಗಿ, ಮೀನೂಟ ಪ್ರೀಯರು ಸಂತಸಗೊಂಡಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಮೀನಿನ ಮಾರುಕಟ್ಟೆಯಲ್ಲಿ ಜನಸಂದಣಿ ದಟ್ಟವಾಗಿದೆ.
PublicNext
08/09/2022 07:50 am