ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ರಕ್ಷಾ ಬಂಧನ ಆಚರಣೆಗೆ ಅಂಗಡಿಗಳಲ್ಲಿ ತುಂಬಿ ಕೊಂಡಿದೆ ವೈವಿಧ್ಯಮಯ ರಾಖಿಗಳು

ಕಾಪು: ಅಣ್ಣ ತಂಗಿಯರ ಬಾಂಧವ್ಯದ ಸಂಕೇತವಾಗಿರುವ ಸಡಗರ ಸಂಭ್ರಮದಿಂದ ಆಚರಿಸುವ ರಕ್ಷಾಬಂಧನ ಹಬ್ಬ ತಯಾರಿ ಎಲ್ಲೆಡೆ ಜೋರಾಗಿದೆ.

ಈ ನಿಟ್ಟಿನಲ್ಲಿ ಮಾರುಕಟ್ಟೆ ತುಂಬಾ ವಿವಿಧ ವಿನ್ಯಾಸದ ರಾಖಿಗಳ ಕಲರವ ಕಾಣಬಹುದು. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದ ರಕ್ಷಾ ಬಂಧನದ ರಾಖಿಗಳ ವ್ಯಾಪಾರದ ಮೇಲೆ ಒಡೆತ ಬಿದ್ದಿತ್ತು. ಆದ್ರೆ ಈ ಬಾರಿ ಯಾವುದೇ ಸಮಸ್ಯೆಗಳಿಲ್ಲ ಕಾರಣ ಬಣ್ಣಬಣ್ಣದ ರಕ್ಷೆಗಳನ್ನು ಖರೀದಿಸಿ ತಮ್ಮ ಸಹೋದರರಿಗೆ ಕಟ್ಟಿ ಸಂಭ್ರಮಿಸಲು ಹೆಣ್ಣುಮಕ್ಕಳು ತಯಾರಾಗಿದ್ದಾರೆ.

ಈ ಬಾರಿ ವಿವಿಧ ವಿನ್ಯಾಸಗಳ ರಕ್ಷೆಯ ಜೊತೆಗೆ ಕೇಸರಿ ಬಣ್ಣದ ರೇಷ್ಮೆ ರಕ್ಷೆಗಳಿಗೂ ಡಿಮ್ಯಾಂಡ್ ಜಾಸ್ತಿ ಆಗಿದ್ದು, ವ್ಯಾಪಾರಸ್ಥರ ಮೊಗದಲ್ಲೂ ಮಂದಹಾಸ ಮೂಡಿದೆ.

Edited By : Manjunath H D
Kshetra Samachara

Kshetra Samachara

10/08/2022 09:08 pm

Cinque Terre

4.7 K

Cinque Terre

0