ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ಣಾಟಕ ಬ್ಯಾಂಕ್ : ಪ್ರಥಮ ತ್ರೈಮಾಸಿಕದಲ್ಲಿ 114.05 ಕೋಟಿ ರೂ. ಲಾಭ

ಮಂಗಳೂರು: ಈ ವರ್ಷದ ಪ್ರಥಮ ತ್ರೈಮಾಸಿಕದ ಅಂತ್ಯದ ವೇಳೆಗೆ ಕರ್ಣಾಟಕ ಬ್ಯಾಂಕ್ 114.05 ಕೋಟಿ ರೂ. ಲಾಭವನ್ನು ಘೋಷಿಸಿದೆ. ಕಳೆದ ಬಾರಿಯ ಮೊದಲ ತ್ರೈಮಾಸಿಕ ವರ್ಷದಲ್ಲಿ ಬ್ಯಾಂಕ್ 105.91 ಕೋಟಿ ರೂ. ಲಾಭವನ್ನು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಪ್ರಥಮ ತ್ರೈಮಾಸಿಕದಲ್ಲಿ ಶೇ.7.69 ಕೋಟಿ ರೂ. ಪ್ರಗತಿ ಸಾಧಿಸಿದೆ‌. ಬ್ಯಾಂಕ್ 2022-23ರ ಆಡಳಿತ ಮಂಡಳಿಯ ಸಭೆಯಲ್ಲಿ ಪ್ರಥಮ ತ್ರೈಮಾಸಿಕ ಹಣಕಾಸು ವರದಿಯನ್ನು ಅಂಗೀಕರಿಸಿದೆ‌.

ಕರ್ಣಾಟಕ ಬ್ಯಾಂಕ್ ನ ನಿರ್ವಹಣಾ ಲಾಭವು 2022ರ ಜೂನ್ 30ಕ್ಕೆ 412.65 ಕೋಟಿ ರೂ. ತಲುಪಿದೆ‌. ನಿವ್ವಳ ಬಡ್ಡಿ ಆದಾಯ ಶೇ.19.62ರ ಬೆಳವಣಿಗೆಯೊಂದಿಗೆ 687.56 ಕೋಟಿ ರೂ.ಗೆ ಏರಿದೆ. 2021ರ ಜೂನ್ 30ರ ಸಮಯಕ್ಕೆ 574.79 ಕೋಟಿ ರೂ. ಇತ್ತು. ಬ್ಯಾಂಕ್ ನ ಒಟ್ಟು ವ್ಯವಹಾರ 2022ರ ಜೂನ್ 30ಕ್ಕೆ ಶೇ‌. 8.67 ರಷ್ಟು ಹೆಚ್ಚಳಕಂಡಿದೆ‌. ಈ ಮೂಲಕ ಬ್ಯಾಂಕ್ ವ್ಯವಹಾರ 1,38,935.71 ಕೋಟಿ‌ ರೂ‌. ತಲುಪಿದೆ.

ಈ ಬಾರಿಯ ಪ್ರಥಮ ತ್ರೈಮಾಸಿಕದ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕರ್ಣಾಟಕ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು, ಬ್ಯಾಂಕ್ ನ ಪ್ರಸಕ್ತ ವಿತ್ತೀಯ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶವನ್ನು ಘೋಷಿಸಿದೆ. ಈ ಮೂಲಕ ಪ್ರಸಕ್ತ ವರ್ಷದ ಕಾರ್ಯನಿರ್ವಹಣೆಯನ್ನು ಶುಭಾರಂಭಗೊಳಿಸಿದೆ‌. ನಮ್ಮ ಮುಂಗಡಗಳು ಶೇ.13.03ರಷ್ಟು ವೃದ್ಧಿಯಾಗಿ ಉಳಿತಾಯ ಹಾಗೂ ಚಾಲ್ತಿ ಖಾತೆಯ ಠೇವಣಿಗಳು ಶೇ.12.51ರಷ್ಟು ಹೆಚ್ಚಳವಾಗಿದೆ. ನಿವ್ವಳ ಲಾಭ ಶೇ.7.69 ದರದಲ್ಲಿ ವೃದ್ಧಿಗೊಂಡಿದೆ‌.

ಬ್ಯಾಂಕ್ ನಿವ್ವಳ ಬಡ್ಡಿ ಮಾರ್ಜಿನ್ ಶೇ. 3.33ಕ್ಕೆ ತಲುಪಿದೆ. ಈ ಎಲ್ಲಾ ಅಂಕಿಅಂಶಗಳು ಬ್ಯಾಂಕ್ ಮುಂಬರುವ ದಿನಗಳಲ್ಲಿ ಹೆಚ್ಚಿನ ವಹಿವಾಟುಗಳನ್ನು ಸಾಧಿಸುವ ನಿಟ್ಟಿನಲ್ಲಿ ಆಶಾದಾಯಕವೆನಿಸಿದೆ ಎಂದು ಹೇಳಿದರು.

Edited By : Nirmala Aralikatti
Kshetra Samachara

Kshetra Samachara

25/07/2022 03:12 pm

Cinque Terre

1.88 K

Cinque Terre

0