ಮಂಗಳೂರು: ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್, ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ 'ವರ್ಷದ ಅತ್ಯುತ್ತಮ ಎಂಎಸ್‌ಎಂಇ ಬ್ಯಾಂಕ್' ಪ್ರಶಸ್ತಿಯನ್ನು ಪಡೆದುಕೊಂಡಿದೆ.
ASSOCHAM ಸಂಸ್ಥೆಯು ಮಾರ್ಚ್ 9ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ಎಂಎಸ್‌ಎಂಇ ಆಧಾರಿತ 8ನೇ ಶೃಂಗಸಭೆಯ ಪ್ರಶಸ್ತಿ ಸಮಾರಂಭದಲ್ಲಿ, ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವ ನಾರಾಯಣ ಟಿ ರಾಣೆ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಬ್ಯಾಂಕ್‌ನಿಂದ ಕ್ರೆಡಿಟ್ ಮಾರ್ಕೆಟಿಂಗ್ ವಿಭಾಗದ ಡಿಜಿಎಂ ಗೋಪಾಲಕೃಷ್ಣ ಸಾಮಗ ಬಿ ಪ್ರಶಸ್ತಿ ಸ್ವೀಕರಿಸಿದರು.
ಬ್ಯಾಂಕ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ ಎಸ್ ಬ್ಯಾಂಕ್ ನ ಈ ಸಾಧನೆಯ ಬಗ್ಗೆ ತಮ್ಮ ಸಂತಸ ಹಂಚಿಕೊಂಡು, “ಕರ್ನಾಟಕ ಬ್ಯಾಂಕ್ ವಿವಿಧ ಡಿಜಿಟಲ್ ಉತ್ಪನ್ನಗಳೊಂದಿಗೆ ಎಂಎಸ್‌ಎಂಇ ವಲಯದ ಸಾಲಗಳಿಗೆ ಆದ್ಯತೆ ನೀಡುತ್ತಿದೆ. ಎಲ್ಲಾ ಗುಣಮಟ್ಟದ ಮಾನದಂಡಗಳನ್ನು ಸರಿಯಾಗಿ ಅನುಸರಿಸುವ ಮೂಲಕ ಎಂಎಸ್‌ಎಂಇ ಸಾಲಗಳನ್ನು ಬ್ಯಾಂಕ್ ತ್ವರಿತವಾಗಿ ವಿಲೇವಾರಿ ಮಾಡುತ್ತಿದೆ ಎಂದು ಹೇಳಿದ್ದಾರೆ.
Kshetra Samachara
19/03/2022 10:44 pm