ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳು ಬಂದ್ : ನೌಕರರಿಂದ ಪ್ರತಿಭಟನೆ

ಉಡುಪಿ: ಸುಧಾರಣೆಯ ನೆಪದಲ್ಲಿ ಕೇಂದ್ರ ಸರಕಾರ ಜನ ವಿರೋಧಿ ಕ್ರಮಗಳನ್ನು ಕೈಗೆತ್ತಿಕೊಂಡಿದ್ದು,ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದು ಹಾಗೂ ಬ್ಯಾಂಕಿಂಗ್ (ತಿದ್ದುಪಡಿ) ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸುವುದನ್ನು ವಿರೋಧಿಸಿ ಬ್ಯಾಂಕ್ ಯೂನಿಯನ್ ಗಳ ಸಂಯುಕ್ತ ವೇದಿಕೆ ಉಡುಪಿ ಘಟಕದಿಂದ ಪ್ರತಿಭಟನೆ ನಡೆಯಿತು.ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟನೆಯಲ್ಲಿ ತೀವ್ರವಾಗಿ AIBEA ಖಂಡಿಸಿತು.

ಮುಖಂಡರಾದ ರಮೇಶ್ ಮಾತನಾಡಿ, "ಬ್ಯಾಂಕ್ ಗಳ ಖಾಸಗೀಕರಣದಿಂದಾಗಿ ನೌಕರರ ಮೇಲೆ ತೀವ್ರವಾದ ಪರಿಣಾಮ ವಾಗಲಿದೆ. ಇದರಿಂದಾಗಿ ನೌಕರರು ಹೆಚ್ಚಿನ ಸಮಯ ಕೆಲಸ ಮಾಡಬೇಕಾಗುತ್ತದೆ. ಈಗಾಗಲೇ ನೌಕರರ ಸಂಖ್ಯೆ ಕಡಿಮೆಯಾಗಿರುವುದರಿಂದ ಹಾಲಿ ನೌಕರರ ಮೆಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಮ್ಯಾನೇಜ್ ಮೆಂಟ್ ಗಳು ನೌಕರರ ಮೇಲೆ ಒತ್ತಡ ಹಾಕುತ್ತಿವೆ" ಎಂದರು.

ಬ್ಯಾಂಕಿಂಗ್ ನಿಯಮಗಳು (ತಿದ್ದುಪಡಿ) ಕಾಯಿದೆಯನ್ನು ವಿರೋಧಿಸಿ ದೇಶಾದ್ಯಂತ ಡಿಸೆಂಬರ್ ೧೬ ಮತ್ತು ೧೭ ರಂದು‌‌ ಬ್ಯಾಂಕ್ ಬಂದ್ ನಡೆಯುತ್ತಿದ್ದು ,ಉಡುಪಿ ಜಿಲ್ಲೆಯಲ್ಲಿ ಕೂಡಾ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ.

ಈ ಸಂಧರ್ಭದಲ್ಲಿ NCBE ಮುಖಂಡರಾದ ಸುಪ್ರಿಯಾ, ಮುಖಂಡರಾದ ರವಿಶಂಕರ್, ಅಖಿಲ ಭಾರತ BEFI ಸಂಘದ ಉಪಾಧ್ಯಕ್ಷ ಹಾಗೂ ರಾಜ್ಯಮಟ್ಟದ ಪ್ರಧಾನ ಕಾರ್ಯದರ್ಶಿ ಎಂ ರತ್ನಾಕರ್ ಶೆಣೈ, ಕೆನರಾಬ್ಯಾಂಕಿನ ಮರಿಯೋ ಮಥಾಯಿಸ್, ಅವಿನಾಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

16/12/2021 11:37 am

Cinque Terre

8.4 K

Cinque Terre

1