ಶಂಕರಪುರ: ನವರಾತ್ರಿ ಸಂದರ್ಭ ದರದಲ್ಲಿ ಭಾರಿ ಏರಿಕೆ ಕಂಡಿದ್ದ ಉಡುಪಿಯ ಶಂಕರಪುರ ಮಲ್ಲಿಗೆಯ ದರ ಸದ್ಯ ಭಾರಿ ಇಳಿಕೆಯಾಗಿದೆ.
ವಾರದ ಹಿಂದೆ ಅಟ್ಟೆಗೆ 1400 ರೂಪಾಯಿಗೆ ಈ ಹೂವು ಮಾರಾಟವಾಗುತ್ತಿತ್ತು. ಈಗ ಮಾರುಕಟ್ಟೆಯಲ್ಲಿ ಅಟ್ಟೆಗೆ ಕೇವಲ 630 ರೂಪಾಯಿಗೆ ಮಾರಾಟವಾಗುತ್ತಿದೆ.
ಉಡುಪಿಯ ಶಂಕರಪುರದಲ್ಲಿ ಬೆಳೆಯುವ ಈ ಮಲ್ಲಿಗೆ ಹೂವು ಪೇಟೆಂಟ್ ಪಡೆದ ಕರಾವಳಿಯ ಏಕಮಾತ್ರ ಹೂವಾಗಿದೆ. ಮುಂಬೈ ಸೇರಿದಂತೆ ದೇಶ- ವಿದೇಶಗಳಲ್ಲಿ ಬಹು ಬೇಡಿಕೆಯ ಶಂಕರಪುರ ಮಲ್ಲಿಗೆ ಶುಭ ಸಮಾರಂಭ ಕಡಿಮೆ ಆಗುತ್ತಿದ್ದಂತೆಯೇ ದರದಲ್ಲೂ ಇಳಿಕೆ ಕಂಡಿದೆ.
Kshetra Samachara
26/10/2021 05:39 pm