ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಕ್ಷಗಾನ ವೇಷಧಾರಿಗಳಿಂದ ಹೊಟೇಲಿನಲ್ಲಿ ಮಸಾಲೆದೋಸೆ ಸಪ್ಲೈ ವಿಡಿಯೋ ವೈರಲ್, ಆಕ್ರೋಶ!

ಉಡುಪಿ: ಯಕ್ಷಗಾನ‌ ಕಲೆ ಎಲ್ಲೆಡೆ ಮನೆಮಾತು.ಹೀಗಾಗಿ ಪ್ರತೀ ಘಟನೆ ,ಪ್ರಸಂಗ,ಹಾಸ್ಯ,ವಿಡಂಬನೆ ,ರಾಜಕೀಯ ಕಾಲೆಳೆಯುವಿಕೆಗೂ ಪಾತ್ರಧಾರಿಗಳು ಯಕ್ಷಗಾನ ಕಲೆಯನ್ನು ಬಳಸುವುದುಂಟು.ಆದರೆ ಇಲ್ಲಿ ಇಬ್ಬರು ಯಕ್ಷಗಾನ ವೇಷಧಾರಿಗಳು, ಹೊಟೇಲಿನಲ್ಲಿ ಮಸಾಲೆ ದೋಸೆ ಸಪ್ಲೈ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋ ನೋಡಿ ಯಕ್ಷಗಾನ ಪ್ರೀಯರೂ ಸಖತ್ ಗರಂ ಆಗಿದ್ದಾರೆ. ಯಕ್ಷಗಾನವನ್ನು ಈ ರೀತಿಯಲ್ಲಿ ಬಳಸಿಕೊಳ್ಳುವುದು ಸರಿಯಲ್ಲ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Edited By : Manjunath H D
Kshetra Samachara

Kshetra Samachara

29/11/2021 11:05 am

Cinque Terre

20.06 K

Cinque Terre

11