ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾರುಕಟ್ಟೆಗೆ ಬರಲಿದೆ ಗೇರುಹಣ್ಣಿನ ವೈನ್: ಪೇಟೆಂಟ್ ಪಡೆದ NITK ಪ್ರೊಫೆಸರ್

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ

ಮಂಗಳೂರು: ಗೇರುಹಣ್ಣಿನ ಮದ್ಯವೆಂದರೆ ತೀರಾ ಲೋಕಲ್ ಎಂಬ ಅಸಡ್ಡೆ ಎಲ್ಲರಲ್ಲೂ ಇದೆ‌. ಆದರೆ ಇದೀಗ ಪಾನಪ್ರಿಯರಿಗೊಂದು ಸಿಹಿಸುದ್ದಿಯೇನೆಂದರೆ, ಇನ್ನು ಮುಂದೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಗೇರುಹಣ್ಣಿನ ವೈನ್ ದೊರೆಯಲಿದೆ. ನಗರದ ಸುರತ್ಕಲ್ ನ ಎನ್ಐಟಿಕೆ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ.ಯವರು ಸಂಶೋಧನೆ ಮಾಡಿರುವ ಈ ಪೇಯಕ್ಕೆ ಭಾರತೀಯ ಸಂಸ್ಥೆಯಿಂದ ಅಧಿಕೃತ ಪೇಟೆಂಟ್ ಲಭ್ಯವಾಗಿದೆ.

ಹೌದು.ಈ ಗೇರುಹಣ್ಣಿನ ವೈನ್ ನಲ್ಲಿ ಗೇರುಹಣ್ಣಿನ ಮದ್ಯದಲ್ಲಿರುವಂತೆ ವಾಸನೆಯಿಲ್ಲ,ಸೇವಿಸಿದ ತಕ್ಷಣ ತಲೆಗೇರುವ ಕಿಕ್ ಇಲ್ಲ. ಈ ವೈನ್ ಬಾಟಲಿಯ ಮುಚ್ಚಳವನ್ನು ತೆರೆದ ತಕ್ಷಣ ಹಿತವಾದ ಪರಿಮಳ ಮೂಗಿಗೆ ಬಡಿದರೆ, ಕುಡಿದಾಗ ಹುಳಿ, ಸಿಹಿ ಹಾಗೂ ಒಗರು ಮಿಶ್ರಿತ ರುಚಿಯಿದೆ. ಫ್ರೊ.ಪ್ರಸನ್ನ ಬಿ.ಡಿ.ಯವರ ಸಂಶೋಧನೆಯ ಫಲವಾಗಿ ಗೇರುಹಣ್ಣಿನ 6 ತರಹೆವಾರಿ ವೈನ್ ಸಿದ್ಧಗೊಂಡಿದೆ. 2010 ರಲ್ಲಿಯೇ ಅವರು ಸಂಶೋಧನೆಯನ್ನು ಆರಂಭಿಸಿದ್ದು ಡಿಸೆಂಬರ್ 2012ರಲ್ಲಿ ಪೇಟೆಂಟ್ ಗೆ ಸಲ್ಲಿಸಿದ್ದರು. ಇದೀಗ ಈ ಸಂಶೋಧನೆಗೆ ಅಧಿಕೃತ ಪೇಟೆಂಟ್ ಲಭ್ಯವಾಗಿದೆ. ಅಲ್ಲದೆ ಇದರ ಬಗ್ಗೆ ಆಸಕ್ತರಿರುವ ಉದ್ಯಮಿಯೋರ್ವರಿಗೆ ಈ ವೈನ್ ಅನ್ನು ನೀಡುವ ಬಗ್ಗೆಯೂ ಪ್ರೊಫೆಸರ್ ಉತ್ಸುಕರಾಗಿದ್ದಾರೆ. ಅಂದುಕೊಂಡಂತೆ ಉದ್ಯಮಿಯು ಈ ವೈನ್ ಸಂಶೋಧನೆಯನ್ನು ಎನ್ಐಟಿಕೆ ಮೂಲಕ ಖರೀದಿಸಿದ್ದಲ್ಲಿ ಖಂಡಿತವಾಗಿಯೂ ಇನ್ನುಮುಂದೆ ಮಾರುಕಟ್ಟೆಗೆ ಗೇರುಹಣ್ಣಿನ ವೈನ್ ಲಗ್ಗೆಯಿಡಲಿದೆ.

ಈ ಗೇರುಹಣ್ಣಿನ ವೈನ್ ಅನ್ನು ಉತ್ತಮ ಗುಣಮಟ್ಟದ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ 500 ಲೀ. ಸಾಮರ್ಥ್ಯವಿರುವ ಪ್ಲ್ಯಾಂಟ್ ನಲ್ಲಿ ಗೇರುಹಣ್ಣಿನ ವೈನ್ ಅನ್ನು ತಯಾರು ಮಾಡಲಾಗಿದೆ. ಅದಕ್ಕೆ ತಗಲುವ ಖರ್ಚು - ವೆಚ್ಚಗಳು, ಯಾವ ರೀತಿ ತಯಾರು ಮಾಡಬಹುದು ಎಂಬ ಪ್ರಯೋಗಗಳನ್ನು ಮಾಡಿ ಫಲಿತಾಂಶವನ್ನು ಪಡೆಯಲಾಗಿದೆ. ಅಲ್ಲದೆ ವೈನ್ ತಜ್ಞರಿಂದಲೂ ಇದೊಂದು ಗೇರುಹಣ್ಣಿನ ಉತ್ತಮ ಪೇಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೇವಲ 8-15% ವರೆಗೆ ಅಲ್ಕೋಹಾಲ್ ಪ್ರಮಾಣವಿರುವ ಈ ಗೇರುಹಣ್ಣಿನ ಪೇಯ ಮಾರುಕಟ್ಟೆಯಲ್ಲಿ ಲಭ್ಯವಾದಲ್ಲಿ ವೈನ್ ಪ್ರಿಯರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Edited By : Nagesh Gaonkar
PublicNext

PublicNext

10/05/2022 11:03 am

Cinque Terre

36.75 K

Cinque Terre

2

ಸಂಬಂಧಿತ ಸುದ್ದಿ