ಮಂಗಳೂರು: ವಿಶ್ವದ ಅತ್ಯಂತ ದುಬಾರಿ, ಐಷಾರಾಮಿ ಕಾರುಗಳಲ್ಲಿ ಒಂದೆಂಬ ಖ್ಯಾತಿಯ ಬೆಂಟ್ಲಿ ಬ್ರ್ಯಾಂಡ್‌ನ ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಎಸ್‌ಯುವಿ (ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಮಂಗಳೂರಿಗೆ ಬಂದಿದೆ.
ನಗರದ ಖ್ಯಾತ ಬಿಲ್ಡರ್, ರೋಹನ್ ಕಾರ್ಪೊರೇಷನ್ ಮಾಲೀಕ ರೋಹನ್ ಮೊಂತೇರೊ ಅವರು ಈ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಈ ಮಾದರಿಯಲ್ಲಿ ಅತ್ಯಂತ ಹೊಸ, ಎಕ್ಸ್ ಕ್ಲ್ಯೂಸಿವ್ ಮಾಡೆಲ್ ಆಗಿದ್ದು ಕರ್ನಾಟಕದಲ್ಲಿ ಇದರ ಪ್ರಪ್ರಥಮ ಕಾರು ರೋಹನ್ ಖರೀದಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೋಹನ್ ಮೊಂತೇರೊ, "ಕಾರು ಬಂದು ಮೂರ್ನಾಲ್ಕು ದಿನಗಳಾಗಿದ್ದು, ಬಹಳ ಚೆನ್ನಾಗಿದೆ. ಡ್ರೈವ್ ಮಾಡಲು ಬಹಳ ಖುಷಿಯಾಗುತ್ತದೆ. ಬೆಂಟ್ಲಿ ಬೆಂಟಾಯ್ಗ ವಿ8 ಎಸ್ ಯು ವಿ ಸೊನ್ನೆಯಿಂದ 100 ಕಿಮೀ ವೇಗ ತಲುಪಲು ಕೇವಲ 4.5 ಸೆಕೆಂಡುಗಳು ಸಾಕು. ಹಾಗೆಯೇ ಗಂಟೆಗೆ ಗರಿಷ್ಟ 290 ಕಿಮೀ ವೇಗದಲ್ಲಿ ಹೋಗಬಲ್ಲದು. ಈ ಕಾರಿನ ಬೆಲೆ ಸುಮಾರು 6.5 ಕೋಟಿ ರೂ. ಆಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಇಂಗ್ಲೆಂಡ್‌ನ ಬೆಂಟ್ಲಿ ಮೋಟರ್ಸ್‌ನ ಕಾರುಗಳು ವಿಲಾಸಿ ಕಾರುಗಳಲ್ಲೇ ಅತ್ಯಂತ ದುಬಾರಿ ಹಾಗೂ ಅಷ್ಟೇ ಪ್ರತಿಷ್ಠಿತ ಎಂದು ಹೆಸರು ಮಾಡಿವೆ. ವಿಶ್ವಾದ್ಯಂತ ರಾಜ ಮನೆತನದವರು, ಬೃಹತ್ ಉದ್ಯಮಪತಿಗಳು, ಪ್ರಭಾವಿ ಹುದ್ದೆಗಳಲ್ಲಿರುವ ರಾಜಕಾರಣಿಗಳು ಮಾತ್ರ ಈ ಕಾರು ಬಳಸುತ್ತಾರೆ.
Kshetra Samachara
21/09/2021 08:16 am