ಕಾಪು: ಉಡುಪಿಯಲ್ಲಿ ಹಿಜಾಬ್ ಬಂದ್ ಎಫೆಕ್ಟ್ ಈಗ ಜೋರಾಗಿದೆ. ಇಲ್ಲಿನ ಕಾಪು ಮಾರಿಗುಡಿಗಳಲ್ಲಿ ವಾರ್ಷಿಕ ಸುಗ್ಗಿ ಮಾರಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ.
ಈ ವರ್ಷ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಸೆಡ್ಡು ಹೊಡೆದಿರುವ ಹಿಂದೂ ಸಂಘಟನೆಗಳು ಭರ್ಜರಿ ಕೋಳಿ ಮತ್ತು ಆಡು ವ್ಯಾಪಾರ ಮಾಡುತ್ತಿವೆ.
ಹಿಂದೂ ಸಂಘಟನೆಗಳು ಗದಗ, ಶಿವಮೊಗ್ಗ, ಹಾಸನದಿಂದ ಆಡು ಮತ್ತು ಕೋಳಿಯನ್ನು ತರಿಸಿಕೊಂಡಿವೆ.ಅಂದಹಾಗೆ, ಸುಗ್ಗಿ ಮಾರಿ ಜಾತ್ರೆಯಲ್ಲಿ ಅಗಾಧ ಸಂಖ್ಯೆಯ ಆಡು ಮತ್ತು ಕೋಳಿಯನ್ನು ದೇವಿಗೆ ಸಮರ್ಪಣೆ ಮಾಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ಟನ್ ಗಟ್ಟಲೆ ಆಡು- ಕೋಳಿಗಳು ದೇವಿಗೆ ಹರಕೆ ಸೇವೆ ಕೊಡಲು ಭಕ್ತರಿಗೆ ಬೇಕಾಗುತ್ತದೆ.
PublicNext
23/03/2022 03:55 pm