ಕಳೆದ ಕೆಲ ದಿನಗಳಿಂದ ಮುಲ್ಕಿ ಪರಿಸರದಲ್ಲಿ ಬಂಗುಡೆ ಮೀನು ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆಟುಕಿದ್ದು ಫುಲ್ ಖುಷ್ ಆಗಿದ್ದಾರೆ. ನೂರು ರೂಪಾಯಿಗೆ 15ಕ್ಕೂ ಹೆಚ್ಚು ಬಂಗುಡೆ ಮೀನು ದೊರೆಯುತ್ತಿದ್ದು ವ್ಯಾಪಾರ ಬಲು ಜೋರಾಗಿದೆ.
ಮಳೆ ಕಡಿಮೆಯಾದ ಬಳಿಕ ಮೀನುಗಾರಿಕಾ ಋತು ಆರಂಭವಾಗಿದ್ದು, ಮುಲ್ಕಿ ಸಮೀಪದ ಹೆಜಮಾಡಿ ಕೋಡಿ ಬಂದರು ಪ್ರದೇಶದಿಂದ ಹೇರಳವಾಗಿ ಬಂಗುಡೆ ಮೀನು ದೊರೆತಿದ್ದು ಮುಲ್ಕಿಯ ಗ್ರಾಮೀಣ ಪ್ರದೇಶದಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ನಡುವೆಯೂ ಮೀನಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಮುಲ್ಕಿ ಆಟೋ ಚಾಲಕರು ಸಹಿತ ವ್ಯಾಪಾರಸ್ಥರು ಫುಲ್ ಖುಷ್ ಆಗಿದ್ದಾರೆ.
PublicNext
18/08/2022 07:20 pm