ಪುತ್ತೂರು : ಕಂಬಳ ಮತ್ತು ಕೋಳಿ ಅಂಕದಲ್ಲಿ ಜೂಜು ನಡೆಯುತ್ತದೆ ಎನ್ನುವ ಕಾರಣಕ್ಕೆ ಎರಡೂ ಕ್ರೀಡೆಗಳಿಗೆ ನಿಷೇಧ ಹೇರಲಾಗಿತ್ತು. ಇದೀಗ ಕೆಲವು ಷರತ್ತುಗಳನ್ನು ಹಾಕುವ ಮೂಲಕ ಅನುಮತಿಯನ್ನು ನ್ಯಾಯಾಲಯ ನೀಡಿದೆ. ಕೋಳಿ ಅಂಕಕ್ಕೆ ಅನುಮತಿ ದೊರೆತ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಫೈಟರ್ ಕೋಳಿಗಳಿಗೆ ಭಾರಿ ಬೇಡಿಕೆ ಬಂದಿದೆ.
ಪ್ರಮುಖವಾಗಿ ಊರಿನ ಕೋಳಿ ಹಾಗೂ ಸೇಲಂ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಳಸಲಾಗುತ್ತಿದ್ದು, ಕೋಳಿ ಅಂಕಕ್ಕೆ ಬರುವ ಮೊದಲು ಕೋಳಿಗಳಿಗೆ ಹಲವು ರೀತಿಯ ತರಬೇತಿಗಳನ್ನೂ ನೀಡಲಾಗುತ್ತದೆ. 10ರಿಂದ 30 ಸಾವಿರದ ವರೆಗಿನ ಫೈಟರ್ ಕೋಳಿಗಳೂ ಕೋಳಿ ಅಂಕದಲ್ಲಿ ಕಾದಾಟಕ್ಕೆ ಬರುತ್ತಿದ್ದು, ಇವುಗಳ ಮೇಲೆ ಲಕ್ಷಕ್ಕೂ ಮಿಕ್ಕಿದ ಜೂಜನ್ನೂ ಕಟ್ಟಲಾಗುತ್ತದೆ. ಕುಪ್ಪುಳ, ಮೈರ , ಕಾವ, ಕೆಮ್ಮರ, ಬಿಳಿ ಕೋಳಿ, ನೀಲ ಕೋಳಿ ಹೀಗೆ ಹಲವು ತರಹದ ಕೋಳಿಗಳನ್ನು ಕೋಳಿ ಅಂಕದಲ್ಲಿ ಕಾದಾಟಕ್ಕೆ ಬಿಡಲಾಗುತ್ತಿದ್ದು, ಕೋಳಿಗಳ ಕಾದಾಟವನ್ನು ವೀಕ್ಷಿಸಲು ನೂರಾರು ಮಂದಿ ಸೇರುತ್ತಾರೆ.
PublicNext
03/03/2022 10:42 am