ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಬಿರುಸಿನ ಮಳೆಯಾಗುತ್ತಿದೆ. ಕರಾವಳಿಯ ಸಾರಿಗೆ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ದಿನದ ಆದಾಯ ಕಡಿಮೆ ಆಗಿದೆ. ಕೆಲವು ಬಸ್‌ಗಳಲ್ಲಿ ನಿರ್ವಹಣೆಯ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲೇ ಮಂಗಳೂರಿನ ಸಾರಿಗೆ ಕ್ಷೇತ್ರಕ್ಕೆ ವಿಶೇಷ ಮಾನ್ಯತೆ ಇದೆ. ಸುಮಾರು 300ಕ್ಕೂ ಅಧಿಕ ಸಿಟಿ ಬಸ್‌ಗಳು ಕಾರ್ಯಚಲಿಸುತ್ತಿದೆ.
ಕೋವಿಡ್ ಕಾರಣದಿಂದಲೂ ಸುಮಾರು ಒಂದೂವರೆ ವರ್ಷ ಬಹುತೇಕ ನಗರದಲ್ಲಿ ಬಸ್ ಸೇವೆ ಸ್ಥಗಿತಗೊಂಡಿತು. ಕೆಲವೊಂದು ಬಸ್‌ಗಳು ಇನ್ನೂ ರಸ್ತೆಗಿಳಿದಿಲ್ಲ. ಹೀಗಿದ್ದಾಗ ಮಳೆಯ ಆರ್ಭಟಕ್ಕೆ ಸಂಕಷ್ಟ ಉಂಟಾಗಿದೆ. ಖಾಸಗಿ, ಸಿಟಿ ಬಸ್ ಮಾಲೀಕರು ಹೇಳುವಂತೆ ಸದ್ಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 50ರಷ್ಟು ಕಡಿಮೆ ಇದೆ.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲೂ ಆದಾಯಕ್ಕೆ ಹೊಡೆತ ಬಿದ್ದಿದ್ದು ಪ್ರತಿ ದಿನ ಸುಮಾರು 1.50 ಲಕ್ಷ ಆದಾಯ ಬರುತ್ತಿತ್ತು. ಆದ್ರೆ ಇದೀಗ ಸದ್ಯ 95 ಸಾವಿರಕ್ಕೆ ಇಳಿಕೆಯಾಗಿದೆ. ಭಾರೀ ಮಳೆಯ ಪರಿಣಾಮ ಪ್ರಯಾಣಿಕರ ಸಂಖ್ಯೆಯ ಕಡಿಮೆ ಇದ್ದುದರಿಂದ ಮಂಗಳೂರು ನಗರದ ಸಿಟಿ ಹಾಗೂ ಖಾಸಗಿ ಬಸ್‌ಗಳ ಕೆಲವೊಂದು ಟ್ರಿಪ್ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
PublicNext
13/07/2022 06:38 pm