ಭಾರತ ಚೀನಾ ಆಂತರಿಕ ಸಮಸ್ಯೆ ಮೀನುಗಾರಿಕೆಗೆ ಬೀಳಲಿದೆ ಆರ್ಥಿಕ ಹೊಡೆತ

ಮಂಗಳೂರು : ಮೀನುಗಾರಿಗೆ ಕರಾವಳಿಯ ಉದ್ಯಮಗಳಲ್ಲಿ ಪ್ರಮುಖವಾಗಿ ಗೋಚರಿಸುವ ಮೀನುಗಾರಿಕೆಗೆ ಕಡಲ ಮಕ್ಕಳು ಎಲ್ಲಿಲ್ಲದ ಶ್ರಮ ವಹಿಸುತ್ತಾರೆ. ಈಗಾಗಲೇ ಕೊಟ್ಯಾಂತರ ರೂಪಾಯಿಯ ಮೀನು ಭಾರತದಿಂದ ಚೀನಾಕ್ಕೆ ರಫ್ತು ಮಾಡಿಕೊಳ್ಳಲಾಗುತ್ತಿದ್ದರೂ ಸದ್ಯ ಕೊರೋನಾ ಹೊಡೆತದಿಂದ ಮೀನುಗಾರರು ಕಷ್ಟದ ಕೂಪದಲ್ಲಿದ್ದಾರೆ.

ಹೌದು ! ಇದೀಗ ಉಭಯ ದೇಶಗಳ ಆತಂರಿಕ ಸಮಸ್ಯೆಗಳು ಮೀನುಗಾರರಿಗೆ ತಲೆನೋವಾಗಿದ್ದು ಗಾಯದ ಮೇಲೆ ನೀರು ಸುರಿದಂತಾಗಿದೆ.

ರಾಜ್ಯದಿಂದ ಪ್ರತಿ ವರ್ಷ ಸುಮಾರು 1 ಸಾವಿರ ಕಂಟೈನರ್ ಗಳ ಮೂಲಕ ಚೀನಾಕ್ಕೆ ಮೀನು ರಫ್ತು ಮಾಡಲಾಗುತ್ತಿತ್ತು. ಒಂದು ಕಂಟೈನರ್ ನಲ್ಲಿ ಬೇರೆ ಜಾತಿಯ ಸುಮಾರು 25 ಟನ್ ಮೀನು ಇರುತ್ತದೆ. ಆದರೆ ಕೊರೊನಾ ಆರಂಭಗೊಂಡ ಬಳಿಕ ಮೀನಿಗೆ ಬೇಡಿಕೆ ಇಲ್ಲದ ಕಾರಣ ವಿದೇಶಿ ರಫ್ತಿನ ಮೇಲೆ ಭಾರೀ ಹೊಡೆತ ಕೊಟ್ಟಿದೆ.

ಚೀನಾ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಿಗೆ ಮೀನು ರಫ್ತು ಕಳೆದ ವರ್ಷ 1600 ಕೊಟಿ ರೂಪಾಯಿ ಮೌಲ್ಯದ ಮೀನು ರಫ್ತಾಗಿದೆ. ಆದರೆ ಯಾವಾಗ ಕೊರೋನಾ ವೈರಸ್ ಉದ್ಭವಿಸಿತೋ ಮೀನು ರಫ್ತಿನ ಮೇಲೆ ಭಾರಿ ಹೊಡೆತವೇ ಬಿದ್ದಿದ್ದು ರಫ್ತು ಸಂಪೂರ್ಣ ನಿಂತು ಹೋಗಿದೆ.

ಸಂಗ್ರಹಿಸಿಟ್ಟ ಮೀನು ರಫ್ತಾಗದೆ ಮೀನುಗಾರರಿಗೆ ಭಾರೀ ನಷ್ಟ ಎದುರಾಗಿದ್ದು ಮತ್ತೊಂದೆಡೆ ಕಾರ್ಮಿಕರ ನಿರ್ವಹಣೆಯ ಹೊಣೆ ಕೂಡ ಮಾಲೀಕನೆ ನೋಡುವ ಕಾರಣ ತೀವ್ರ ನಷ್ಟ ಉಂಟಾಗಿದೆ.

ಸದ್ಯ ಭಾರತ-ಚೀನಾ ನಡುವಿನ ಸಂಬಂಧ ವಿಷಯದಲ್ಲಿ ತೊಂದರೆ ಇದ್ದು, ಮೀನು ರಫ್ತಾಗುವ ಮೇಲೆ ಏಟಾಗುವುದೇ ಎಂಬ ಚಿಂತೆ ವ್ಯಾಪಕವಾಗಿ ಕಾಡುತ್ತಿದೆ.

ಈಗಾಗಲೇ ಮಂಗಳೂರಿನಲ್ಲಿ ಮೀನು ರಫ್ತು ಮಾಡುವ 12 ಕಾರ್ಖಾನೆಗಳಿವೆ ಉಡುಪಿಯಲ್ಲಿ 10 ರಫ್ತು ಘಟಕಗಳಿವೆ. ಚೀನಾವನ್ನೇ ಅವಲಂಬಿಸಿದ್ದ, ಮಾರುಕಟ್ಟೆಗೆ ಕೊರೋನಾ ಹೊಡೆತ ಕೊಟ್ಟಿದ್ದು ಈಗಾಗಲೇ ನಷ್ಟದಲ್ಲಿರುವ ಮೀನುಗಾರಿಕೆ ತಡವಾಗಿ ಆರಂಭವಾಗಿದರೂ ಕೂಡ ರಫ್ತು ಮಾತ್ರ ಆರಂಭವಾಗಿಲ್ಲ. ಈ ಕಾರಣ ರಫ್ತು ವ್ಯಾಪಾರಸ್ದರ ಗಮನ ವಿದೇಶಿ ಮಾರುಕಟ್ಟೆಯತ್ತ ನೆಟ್ಟಿದೆ.

ಒಂದು ಕಡೆ ಚೀನಾಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಚೀನಾ ವಸ್ತುಗಳನ್ನು ಚೀನಾ ಆಪ್ ಬ್ಯಾನ್ ಮಾಡುವ ನಿರ್ಧಾರ ಭಾರತ ಸರಕಾರ ಕೈಗೊಳ್ಳುತ್ತಿದೆ. ಇದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಚೀನಾ ಮೀನುಗಾರಿಕಾ ಆಮದನ್ನು ನಿಲ್ಲಿಸಿದ್ದೆ ಆದಲ್ಲಿ ಕರಾವಳಿಯ ಮೀನುಗಾರಿಕೆಗೆ ದೊಡ್ಡ ಹೊಡೆತ ಉಂಟಾಗಲಿದೆ.

Kshetra Samachara

Kshetra Samachara

1 month ago

Cinque Terre

14.51 K

Cinque Terre

2

  • Ganesha G
    Ganesha G

    supdr

  • Ramananda Nayak
    Ramananda Nayak

    China CORONA.kottide Santhosha Padonavr?