ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವ ಉಡುಪಿಯ "ಮಲಬಾರ್ ಗೋಲ್ಡ್ ಅಂಡ್ ಡೈಮಂಡ್"

ಉಡುಪಿ: ಉಡುಪಿಯ ಮಲಬಾರ್ ಗೋಲ್ಡ್ ಹೆಸರು ಕೇಳಿದ ತಕ್ಷಣ ಇಲ್ಲಿಯ ಜನರಿಗೆ ನೆನಪಾಗುವುದು ,ಅದರ ಸೇವಾ ಕಾರ್ಯಗಳು. ಹೌದು ,ತನ್ನ ವಹಿವಾಟಿನ ಒಂದಷ್ಟು ಹಣವನ್ನು ಮಲಬಾರ್ ಗೋಲ್ಡ್ ಸಾಮಾಜಿಕ ಸೇವಾ ಕಾರ್ಯಗಳಿಗೆ ವ್ಯಯಿಸುತ್ತಿದೆ. ಕೇವಲ ಲಾಭ ಗಳಿಸುವ ಉದ್ದೇಶ ಮಾತ್ರ ಹೊಂದಿರುವ ಹಲವು ಸಂಸ್ಥೆಗಳ ಮಧ್ಯೆ ಮಲಬಾರ್ ಗೋಲ್ಡ್‌ಅನ್ನು ಜನರು ಆಯ್ಕೆ ಮಾಡಿಕೊಳ್ಳುವುದು ಇದೇ ಕಾರಣಕ್ಕೆ.

ನಗರದ ಹೃದಯ ಭಾಗದಲ್ಲಿ ಭವ್ಯ ಶೋರೂಮ್ ಹೊಂದಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಕಳೆದ 9 ವರ್ಷಗಳಿಂದ ಉಡುಪಿಯ ಗ್ರಾಹಕರಿಗೆ ಉತ್ತಮ‌ ಸೇವೆ ನೀಡುತ್ತಾ ಬಂದಿದೆ. ಗುಣಮಟ್ಟ ಮತ್ತು ಉತ್ತಮ ಸೇವೆ ಮಲಬಾರ್‌ನ ಧ್ಯೇಯ ವಾಕ್ಯಗಳು.

ಬ್ರಾಂಚ್ ಮ್ಯಾನೇಜರ್ ಆಗಿರುವ ಹಫೀಝ್, ಸಮಾಜ ಸೇವೆಯ ತುಡಿತ ಇರುವವರು. ಈ ಕಾರಣದಿಂದಾಗಿ ಇಲ್ಲಿ‌ ನಿತ್ಯ ಸಾಂಸ್ಕೃತಿಕ ,ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.ಹೀಗಾಗಿ ನಗರದ ಬಹುತೇಕ ಗಣ್ಯ ವ್ಯಕ್ತಿಗಳು, ಕಲಾವಿದರು ಮತ್ತು ಸಾಹಿತಿಗಳು ಒಂದಲ್ಲೊಂದು ರೀತಿಯಲ್ಲಿ‌ ಮಲಬಾರ್ ಗೋಲ್ಡ್ ಜೊತೆ ಸಂಬಂಧ ಹೊಂದಿದ್ದಾರೆ.

ಚಿನ್ನಾಭರಣ ಮತ್ತು ವಜ್ರಗಳ ಅಪೂರ್ವ ಭಂಡಾವೇ ಇಲ್ಲಿದ್ದು ಬಂದ ಗ್ರಾಹಕರು ಇಲ್ಲಿಂದ ಬರಿಗೈಯಲ್ಲಿ ಹೋಗುವ ಪ್ರಮೇಯವೇ ಬರುವುದಿಲ್ಲ.ಹಬ್ಬ ಹರಿದಿನಗಳಲ್ಲಂತೂ ಮಲಬಾರ್ ಗೋಲ್ಡ್ ನ್ನು‌ ಮೀರಿಸುವ ಮತ್ತೊಂದು ಮಳಿಗೆ ಇಲ್ಲ. ಸದ್ಯ ನವರಾತ್ರಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮತ್ತು ಅಫರ್ ನಡೆಯುತ್ತಿಧ.ಕೆರೆಯ ನೀರನ್ನು ಕೆರೆಗೆ ಚೆಲ್ಲುವ ರೀತಿಯಲ್ಲಿ ವ್ಯಾಪಾರದಲ್ಲಿ ಬಂದ ಲಾಭಾಂಶವನ್ನು ಸಮಾಜಕ್ಕೆ ನೀಡುವ ಮಲಬಾರ್ ಗೋಲ್ಡ್ ನಲ್ಲಿ ಖರೀದಿಸಿದರೆ ,ಗ್ರಾಹಕರಿಗೂ ಸಮಾಜ ಸೇವೆಯಲ್ಲಿ ಭಾಗಿಯಾದ ಸಾರ್ಥಕತೆ ಸಿಗುತ್ತದೆ.

Edited By : Somashekar
PublicNext

PublicNext

03/10/2022 05:06 pm

Cinque Terre

30.13 K

Cinque Terre

2

ಸಂಬಂಧಿತ ಸುದ್ದಿ