ಶೇಂದಿ ಅಂಗಡಿಯ ಹೊಸ ಸ್ಪರ್ಶಕ್ಕೆ ಗ್ರಾಹಕರೀಗ ಪುಲ್ ಫಿದಾ

ಮಂಗಳೂರು : ಮನುಷ್ಯನಿಗೆ ಹೊಸ ಚಿಂತನೆ ಇತತರಿಗಿಂತ ಭಿನ್ನವಾಗಿ ಕಾಣಬೇಕೆಂಬ ಹಂಬಲ ಎಂತಹವರನ್ನಾದ್ರೂ ಹೊಸ ಶೈಲಿಯ ಮಾರ್ಪಾಡಿಗೆ ಕರೆದೊಯ್ಯುತ್ತದೆ.

ಅಂತಹ ಹೊಸ ಶೈಲಿಯಲ್ಲಿ ಇಲ್ಲೊಂದಿಷ್ಟೂ ಶೇಂದಿ ಅಂಗಡಿಗಳು ಗ್ರಾಹಕರನ್ನು ಆಕರ್ಷಿಷಲು ಬಾರ್ ಸ್ವರೂಪ ತೆರೆದು ಕೊಂಡಿದ್ದು ಜನರನ್ನ ತನ್ನತ್ತ ಸೆಳೆಯುತ್ತಿವೆ‌.

ಹೌದು ! ತಲಪಾಡಿ ಹಾಗೂ ಕೂಳೂರಿನಲ್ಲಿ ಶೇಂದಿ ಬಾರ್ ಓಪನ್ ಆಗಿದ್ದು ಈ ಹಿಂದೆ ಶೀಟು, ಟರ್ಪಾಲು ಹಾಕಿದ ಮಾಡು, ತಟ್ಟಿಯ ಗೋಡೆಯ ಹಳೇ ಶೇಂದಿ ಅಂಗಡಿಗಳು ಈಗ ಯುವ ಜನರನ್ನು ಸೆಳೆಯಲು ಬಾರ್ ನಂತೆಯೇ ಕಟ್ಟಡ ವಿನ್ಯಾಸಗೊಳಿಸಿ, ಅಲ್ಲಿ ಶೇಂದಿ ಜತೆಗೆ ಮೀನು, ಕೋಳಿ ಖಾದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ.

ಗ್ಲಾಸ್ ಬದಲು ಪಾರದರ್ಶಕ ಜಗ್ ಒಳಗೆ ಶೇಂದಿ ಹಾಕಿ ಗ್ಲಾಸ್ ಸಹಿತ ನೀಡಲಾಗುತ್ತಿದ್ದು ಪ್ರಮುಖವಾಗಿ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಿ ಗ್ರಾಹಕರನ್ನ ತನ್ನೆಡೆ ಆಕರ್ಷಿಸುತ್ತಿದೆ.

ಉಡುಪಿ ಜಿಲ್ಲೆಯ ಮಲ್ಪೆ, ಕೆಮ್ಮಣ್ಣು ವಾತಾವರಣದಲ್ಲಿ ಕೆಲವು ವರ್ಷಗಳ ಹಿಂದೆಯೇ ಇಂಥ ಹೈಟೆಕ್ ಸ್ಪರ್ಶದ ‘ಟಾಡಿ ಶಾಪ್’ಗಳು ಬಾಗಿಲು ತೆರೆದಿದ್ದವು ಆದರೆ ಕೊರೊನಾ ವೈರಸ್ ಮುಂಜಾಗ್ರತಾ ಅವಧಿಯ ಲಾಕ್ಡೌನ್ ಬಳಿಕ ವಹಿವಾಟು ಕುಂಠಿತಗೊಂಡಿದ್ದವು.

ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಕೊರೊನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದು ಇಂಥ ಹೊತ್ತಿನಲ್ಲಿ ಸಮಾನ ಮನಸ್ಕರ ತಂಡವೊಂದು ಸೇರಿ ಶೇಂದಿ ಬಾರ್ ಆರಂಭಿಸುತ್ತಿರುವುದು ದ.ಕ. ಜಿಲ್ಲಾ ಗುತ್ತಿಗೆದಾರರ ಮಹಾಮಂಡಲ ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ.

ಇಂದಿನ ದಿನಗಳಲ್ಲಿ ಶೇಂದಿ ಅಂಗಡಿ ಅಥವಾ ಬಾರ್ ತೆರೆಯಲು ತಹಶೀಲ್ದಾರ್ ಪರವಾನಗಿ ನೀಡುವ ಅಧಿಕಾರ ಹೊಂದಿದ್ದು ಎರಡು ಜಿಲ್ಲೆಗಳಲ್ಲಿ 440 ಅಂಗಡಿ ಇವೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 260 ಶೇಂದಿ ಅಂಗಡಿಗಳಿದ್ದು, 1600 ಗುತ್ತಿಗೆದಾರದಿಂದ್ದಾರೆ. 22 ಗುತ್ತಿಗೆದಾರರಿದ್ದಾರೆ ಸೊಸೈಟಿಗಳಿದ್ದು, 13 ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿವೆ. ಗುತ್ತಿಗೆದಾರರಿಗೆ ದಿನಕ್ಕೆ 1,500ರಿಂದ 2 ಸಾವಿರ ರೂ. ತನಕ ಆದಾಯವಿದೆ. ಉಡುಪಿ ಜಿಲ್ಲೆಯಲ್ಲಿ 180ರಷ್ಟು ಶೇಂದಿ ಅಂಗಡಿಗಳಿದ್ದು ಗುತ್ತಿಗೆದಾರರ ಸಂಘಗಳಲ್ಲಿ 1800 ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ 16 ಸೊಸೈಟಿಗಳಿದ್ದು, 10 ಬ್ಯಾಂಕಿಂಗ್ ಕಾರ್ಯಗಳು ನಡೆಸುತ್ತಿವೆ.

Kshetra Samachara

Kshetra Samachara

12 days ago

Cinque Terre

6.98 K

Cinque Terre

1

  • Yashodhara kotian
    Yashodhara kotian

    ನೀರಾ ಪೇಯಕ್ಕೆ ಹೊಸ ಸ್ವರೂಪ