ಬ್ರಹ್ಮಾವರ: ಬ್ರಹ್ಮಾವರ ಮತ್ತು ಬಾರಕೂರು ರೋಟರಿ ವತಿಯಿಂದ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಟೀಂ ಅಭಿಮತ ಸಹಕಾರದಿಂದ ಹಲಸು ಮತ್ತು ಹಣ್ಣು ಮೇಳ ಬ್ರಹ್ಮಾವರ ಎಸ್ ಎಂಎಸ್ ಸಮುದಾಯ ಭವನದಲ್ಲಿ ಜರುಗಿತು.
ರೋಟೇರಿಯನ್ ಜಯಗೌರಿಯವರು ಹಲಸಿನ ಹಣ್ಣನ್ನು ಕತ್ತರಿಸುವ ಮೂಲಕ ಮೇಳ ಉದ್ಘಾಟಿಸಿದರು. ನಾನಾ ಭಾಗದಿಂದ ಬಂದ 65 ಮಳಿಗೆಗಳಲ್ಲಿ ವಿವಿಧ ತಳಿಯ ಹಲಸಿನ ಕಸಿ ಗಿಡಗಳು, ತುಮಕೂರಿನ ಕೆಂಪು ಹಲಸು, ವಿವಿಧ ಹಣ್ಣಿನ ಬೀಜಗಳು, ಹಲಸಿನ ಹಾಗೂ ಇತರ ಹಣ್ಣಿನ ಉತ್ಪನ್ನಗಳಿಂದ ತಯಾರಾದ ಹೋಳಿಗೆ, ಐಸ್ ಕ್ರೀಂ, ಚಿಪ್ಸ್ ಇತ್ಯಾದಿ ತಿನಿಸುಗಳನ್ಬು ಮೇಳಕ್ಕೆ ಬಂದ ಸಾರ್ವಜನಿಕರು ಸವಿದರು. ನಿಸರ್ಗದತ್ತ ತಿನಿಸುಗಳನ್ನು ಜನರು ಹೆಚ್ಚು ಮೆಚ್ಚುತ್ತಾರೆ ಎನ್ನುವುದಕ್ಕೆ ಈ ಮೇಳ ಸಾಕ್ಷಿಯಾಯಿತು.
Kshetra Samachara
18/07/2022 07:20 pm