ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನಮನಸೆಳೆದ ಮಣಿಪಾಲದ 'ನಮ್ಮ ಅಂಗಡಿ' ಮೇಳ

ವರದಿ: ರಹೀಂ ಉಜಿರೆ

ಮಣಿಪಾಲ: ಮಣಿಪಾಲದ ಸ್ಕೂಲ್‌ ಆಫ್ ಕಮ್ಯುನಿಕೇಷನ್‌ನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ 'ನಮ್ಮ ಅಂಗಡಿ' ಎಂಬ ಮಾರಾಟ ಮೇಳ ಮತ್ತು ವಸ್ತು ಪ್ರದರ್ಶನ ಉಡುಪಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಅನಾಥ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುವುದಕ್ಕಾಗಿ ರೂಪುಗೊಂಡ 'ನಮ್ಮ ಭೂಮಿ' ಸಂಸ್ಥೆ ಸಹಯೋಗದಲ್ಲಿ ವರ್ಷಂಪ್ರತಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ಹಲವು ವರ್ಷಗಳಿಂದ 'ನಮ್ಮ ಅಂಗಡಿ' ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಮಾಜಿಕ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂವೇದನೆ ಬೆಳೆಸುವುದು, ನಮ್ಮ ಭೂಮಿಯ ಮಕ್ಕಳು ಹಾಗೂ ಇತರ ಕರಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಜತೆಗೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಜ್ಞಾನ ಒದಗಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗುತ್ತದೆ.

ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕಲಾಕೃತಿಗಳು, ಬೆಡ್‌ಶೀಟ್‌, ಅಲಂಕಾರಿಕ ವಸ್ತುಗಳು, ರೆಡಿಮೇಡ್ ಬಟ್ಟೆಗಳು, ಆಹಾರ ತಿನಿಸುಗಳು, ನೂತನ ಟ್ರೆಂಡ್‌ಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಆಭರಣಗಳು ಹೀಗೆ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉತ್ತಮ‌ ಸ್ಪಂದನೆ ವ್ಯಕ್ತವಾಯಿತು. ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್ ವಿದ್ಯಾರ್ಥಿಗಳ ವ್ಯಾವಹಾರಿಕ ಜ್ಞಾನವನ್ನು ಒರೆಗೆ ಹಚ್ಚುವುದು ಮತ್ತು ಮರೆಯಾಗುತ್ತಿರುವ ಸಾಂಪ್ರದಾಯಿಕ ಕರಕುಶಲ ವಸ್ತುಗಳಿಗೆ ದೊಡ್ಡಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು 'ನಮ್ಮ ಅಂಗಡಿ'ಯ ಉದ್ದೇಶವಾಗಿದೆ.

Edited By : Nagesh Gaonkar
Kshetra Samachara

Kshetra Samachara

14/04/2022 09:24 pm

Cinque Terre

16.28 K

Cinque Terre

0

ಸಂಬಂಧಿತ ಸುದ್ದಿ