ಎಲ್ಲೆಲ್ಲೂ ಹೂಗಳ ಮಾಲೆ, ಖರೀದಿ ಭರಾಟೆ, ಗಣಪತಿ ಪೆಂಡಾಲಿಗೆ ಸಿದ್ಧತೆ... ಮೋದಕ ಪ್ರಿಯನ ಆರಾಧನೆಗೆ ಕೃಷ್ಣನಗರಿಯಲ್ಲಿ ಭರದ ತಯಾರಿ ನಡೆದಿವೆ.
ಕಳೆದ 2 ವರ್ಷ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲ್ಪಟ್ಟಿದ್ದ ಶ್ರೀ ಗಣೇಶೋತ್ಸವ ಈ ವರ್ಷ ಅದ್ಧೂರಿಯಾಗಿ ನಡೆಸಲು ವಿವಿಧ ಗಣೇಶೋತ್ಸವ ಸಮಿತಿಗಳು ತಯಾರಿ ಮಾಡಿಕೊಳ್ಳುತ್ತಿವೆ.
ಶ್ರೀ ಗಣೇಶನ ವಿಗ್ರಹಗಳ ತಯಾರಿ ಕೆಲಸಗಳು ಬಹುತೇಕ ಪೂರ್ಣಗೊಂಡು ಸಾರ್ವಜನಿಕವಾಗಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ವಿವಿಧ ಸಂಘ ಸಂಸ್ಥೆಗಳ ಸಹಿತ ಯುವಕ ಮಂಡಲಗಳು, ಧಾರ್ಮಿಕ ಸಂಘಟನೆಗಳು ತಯಾರಿ ನಡೆಸಿವೆ. ದೇವಸ್ಥಾನ, ಭಜನಾ ಮಂದಿರ, ಮನೆಗಳಲ್ಲಿ ಅಥವಾ ಸರಕಾರಿ, ಖಾಸಗಿ ಬಯಲು ಪ್ರದೇಶದಲ್ಲಿ ಈ ಬಾರಿ ವೈಭವದಿಂದ ಗಣೇಶೋತ್ಸವ ಆಚರಣೆ ನಡೆಯಲಿದೆ.
ನಗರದಲ್ಲಿ ವಿವಿಧ ವಸ್ತುಗಳ ಖರೀದಿ ಭರದಿಂದ ನಡೆಯುತ್ತಿದೆ. ನಗರದ ಕೆಎಂ ಮಾರ್ಗ, ರಥಬೀದಿ, ಬಸ್ ನಿಲ್ದಾಣ, ಚಿತ್ತರಂಜನ್ ವೃತ್ತ, ಕಲ್ಲಂಕ, ಕಾಪು ಪೇಟೆ, ಬ್ರಹ್ಮಾವರ, ಕೋಟ, ಹಿರಿಯಡ್ಕ ಮಲ್ಪೆ ಭಾಗದಲ್ಲಿ ಚಟುವಟಿಕೆ ಗರಿಗೆದರಿದೆ.
PublicNext
30/08/2022 01:11 pm