ಉಡುಪಿ: ಎಂಬಿಎ ಪದವೀಧರೆಯೊಬ್ಬರು ಮಹಿಳೆಯೊಬ್ಬರು ಕೈತುಂಬ ಸಂಬಂಳ ಪಡೆಯುತ್ತಿದ್ದ ಉದ್ಯೋಗವನ್ನು ತೊರೆದು ಉಡುಪಿ ಕೈಮಗ್ಗ ಸೀರೆಗಳಿಗೆ ಮಾಡರ್ನ್ ಟಚ್ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ನೇಕಾರರ ನೆರವಿಗೆ ನಿಂತು ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು. ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿ ಮಹಾಲಸ ಕಿಣಿ ಅವರು ಮುಂಬೈನಲ್ಲಿ ಉತ್ತಮ ಸಂಬಳ ಬರುವ ಉದ್ಯೋಗದಲ್ಲಿದ್ದರು. ಆದರೆ ಅವರು ತಮ್ಮೂರಿನ ಉಡುಪಿ ಸೀರೆಯನ್ನು ಪ್ರಖ್ಯಾತಗೊಳಿಸಬೇಕು ಅಂತ ಪಣತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ರಿಸೈನ್ ಮಾಡಿ ತಮ್ಮೂರಿಗೆ ಹಿಂದಿರುಗಿ ಸ್ಥಳೀಯ ನೇಕಾರರನ್ನು ಸೇರಿಸಿ ನೇಕಾರಿಕೆ ವೃತ್ತಿ ಆರಂಭಿಸಿದ್ದಾರೆ. ಮಹಾಲಸ ಕಿಣಿ ಅವರು ಉಡುಪಿ ಮಗ್ಗದ ಸೀರೆಗೆ ಮಾಡರ್ನ್ ಟಚ್ ನೀಡಿದಷ್ಟೇ ಅಲ್ಲದೆ ಆನ್ಲೈನ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
Kshetra Samachara
27/10/2020 04:00 pm