ಮೂಡುಬಿದಿರೆ: ದುಬೈನಲ್ಲಿ ನಡೆದ 'ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್2020' ಕಾರ್ ರೇಸ್‌ನಲ್ಲಿ ಮೂಡುಬಿದಿರೆಯ ಯುವಕನಿದ್ದ ಭಾರತ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.
ದುಬೈನಲ್ಲಿ ಗುರುವಾರ 6 ಗಂಟೆಗಳ ಕಾಲ ನಡೆದ ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್ ಕಾರ್ ರೇಸ್‌ನಲ್ಲಿ ಭಾರತ ದೇಶದ ಐವರು ಚಾಲಕರನ್ನೊಳಗೊಂಡ ತಂಡ ಭಾಗವಹಿಸಿತ್ತು. ಕೊಲ್ಕತ್ತಾ ಮೂಲದ ಟೀಮ್ ಮ್ಯಾನೇಜರ್ ದೀಪಾಚಿಜನ್ ಬಿಸ್ವಾಸ್ ನೇತೃತ್ವದ ಐವರು ಚಾಲಕರ ತಂಡದಲ್ಲಿ ಕರ್ನಾಟಕದಿಂದ ಮೂಡುಬಿದಿರೆ ಕೋಟೆಬಾಗಿಲಿನ ಸುಹೈಬ್ ಆಲಿ(24) ಒಬ್ಬರಾಗಿದ್ದರು.
ಸುಹೈದ್ ಆಲಿ ಅವರು ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಎಂ. ಕೆ. ಅಬೂಬಕ್ಕರ್ ಅವರ ಪುತ್ರರಾಗಿದ್ದಾರೆ. ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿರುವ ಅಮೆರಿಕನ್ ಮೂಲದ ಬಿಟೆಕ್ನಾಲಜಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.
Kshetra Samachara
19/09/2020 04:38 pm