ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರಿದ ವಿಚಾರ ತಿಳಿದ ಬೆಂಗಳೂರು ಮೂಲದ ಸಮಾಜ ಸೇವಕರಾದ ಬಿಜೆಪಿ ಮುಖಂಡ ಪ್ರಕಾಶ್ ವರ್ಮವ್ ಎಂಬ ಭಕ್ತರೋರ್ವರು ಕ್ಷೇತ್ರದ ಬಗ್ಗೆ ಕುತೂಹಲ ಮೂಡಿ, ಸುರತ್ಕಲ್ ನ ವೈದ್ಯರೊಬ್ಬರಿಂದ ಪೊಳಲಿ ದೇವಳದ ಬಗ್ಗೆ ತಿಳಿದುಕೊಂಡು ಕ್ಷೇತ್ರಕ್ಕೆ ಬಂದಿದ್ದಾರೆ. ಬರುವಾಗ ತನ್ನ ಸಂಬಂಧಿಕರು ಮತ್ತು ಸ್ನೇಹಿತರನ್ನು ಪ್ರತ್ಯೇಕ ಬಸ್ಸಿನಲ್ಲಿ ಕರೆದುಕೊಂಡು ಬಂದು ಊರಿನಿಂದ ತಂದ ಹೂವು, ಹಣ್ಣುಗಳಿಂದ ಸಂಪೂರ್ಣ ದೇವಸ್ಥಾನವನ್ನು ಶೃಂಗರಿಸಿ ಚಂಡಿಕಾ ಯಾಗ ಮಾಡಿಸಿ ಧನ್ಯತೆ ಪಡೆದಿದ್ದಾರೆ.
ಪೊಳಲಿ ದೇವಳದ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್, ಪದ್ಮನಾಭ ಭಟ್, ಅನಂತ ಭಟ್ ಪೂಜೆ ನೆರವೇರಿಸಿದರು. ದೇವಳದ ಕಾರ್ಯ ನಿರ್ವಹಣಾಧಿಕಾರಿ ಪಿ. ಜಯಮ್ಮ , ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿ ಇದ್ದರು. ಹಿರಿಯ ಬಿಜೆಪಿ ಮುಖಂಡ, ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿ ಸದಸ್ಯ ವೇಣುಗೋಪಾಲ್ ಹಾಗೂ ಅವರ ಅಪ್ತರು ಉಪಸ್ಥಿತರಿದ್ದರು.
Kshetra Samachara
19/11/2020 07:58 pm