ಉಡುಪಿ: ಮರ- ಗಿಡದಿಂದ ಎಲೆ ಬಿದ್ದರೆ ಅದು ಮುಂದೆ ಒಂದೋ ಗೊಬ್ಬರವಾಗುತ್ತೆ, ಇಲ್ಲಾ ಒಲೆಯ ಉರುವಲಾಗುತ್ತೆ. ಆದರೆ, ಅದರಲ್ಲೂ ಕೂಡ ಕಲೆ ಅರಳುತ್ತೆ ಅಂದರೆ ಆಶ್ಚರ್ಯ ಮೂಡುತ್ತೆ ಅಲ್ವಾ. ಈ ಕಲಾವಿದ ವಿಶೇಷತೆಯೇ ಅದು. ಬಿದ್ದು ಹಾಳಾಗಿ ಹೋಗುವ ಎಲೆಗಳಲ್ಲಿ ನಾನಾ ಚಿತ್ರ, ಚಿತ್ತಾರ ಬಿಡಿಸುವ ಈ ಅಪರೂಪದ ಕಲಾವಿದ ಯಾರು ಅಂತೀರಾ ಈ ಸ್ಟೋರಿ ನೋಡಿ...
ಹಚ್ಚ ಹಸಿರಿನ ಎಲೆಗಳಲ್ಲಿ ಮೂಡಿರುವ ಆಕರ್ಷಕ, ಅಚ್ಚರಿ ತರುವ ಆಕೃತಿಗಳಿವು. ಸಾಮಾನ್ಯವಾಗಿ ಗಮನಿಸಿದರೆ ಕಾಣಿಸದ ಎಲೆಯ ಚಿತ್ತಾರದ ಹಿಂದೆ ಖಾಲಿ ಕಾಗದ ಇಲ್ಲ, ಆಗಸಕ್ಕೆ ಹಿಡಿದರೆ ಮಾಯ್ರ ಚಿತ್ತಾರ ಕಾಣುತ್ತೆ. ಬರೀ ಕೈಯಿಂದ ಕಟ್ಟರ್ ಬಳಸಿ ಕಲೆ ಅರಳಿಸುವ ಈ ಕಲಾವಿದ ಇರುವುದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ. ಅಕ್ಷಯ್ ದೇವಾಡಿಗ ಈ ವಿನೂತನ ಕಲೆಯ ಸರದಾರ. ತನ್ನ ಮನಸ್ಸಿಗೆ ಬಂದ ಚಿತ್ರವನ್ನು ಎಲೆಯ ಮೇಲೆ ಪೆನ್ನಿನಲ್ಲಿ ಬರೆದುಕೊಳ್ಳುವ ಅಕ್ಷಯ್ ಕರಾಮತ್ತು ಇರುವುದು ಕಟ್ಟರ್ ನಲ್ಲಿ ಕಟ್ ಮಾಡುವುದರಲ್ಲಿ! ಒಂದು ಚಿತ್ರ ಬಿಡಿಸಲು ಸುಮಾರು ೧ ಗಂಟೆ ತೆಗೆದುಕೊ ಳ್ಳುವ ಈತನ ಲೀಫ್ ಆರ್ಟ್ ಸಾಮಾಜಿಕ ಜಾಲತಾಣದಲ್ಲಿ ಯುವ ಜನರಲ್ಲಿ ಕ್ರೇಜ್ ಹೆಚ್ಚಿಸಿದೆ.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಓದುತ್ತಿರುವ ಅಕ್ಷಯ್, ೨೦೧೮ರಲ್ಲಿ ಒಮ್ಮೆ ಹೀಗೆ ಪ್ರಯೋಗಾತ್ಮಕವಾಗಿ ದಾಸವಾಳದ ಎಲೆಯಲ್ಲಿ ಚಿತ್ರ ಬಿಡಿಸಿ ಕಟ್ಟರ್ ಮೂಲಕ ಲೀಫ್ ಆರ್ಟ್ ಟ್ರೈ ಮಾಡಿದ್ದರು. ಪ್ರಥಮವಾಗಿ ಗಣೇಶನ ವಿಗ್ರಹದ ಚಿತ್ರ ಕೆತ್ತಿದ್ದ ಹಿನ್ನೆಲೆಯಲ್ಲಿ ೨೦೧೯ರ ಗಣೇಶ ಚತುರ್ಥಿಯಂದು ವರ್ಷದ ಹಿಂದೆ ಬಿಡಿಸಿದ್ದ ಗಣೇಶನ ಚಿತ್ತಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್‌ಗೆ ಉತ್ತಮ ಪ್ರೋತ್ಸಾಹ ಬಂದ ಕಾರಣ ಅದೇ ಕಲೆ ಕುರಿತು ಮತ್ತಷ್ಟು ಮಾಹಿತಿ ಪಡೆದು ಅನೇಕ ಕಲಾಕೃತಿಗಳನ್ನು ರಚಿಸಿದ್ದಾರೆ.
Kshetra Samachara
04/11/2020 07:26 am