ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರಂಗ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ: 1 ಕೋಟಿ ವೆಚ್ಚದ ಗೋದಾಮು

ಹೆಬ್ರಿ : ಸಂಘದ ರೈತ ಸದಸ್ಯರ ಅನುಕೂಲಕ್ಕಾಗಿ ಸಂಘದ ಕೇಂದ್ರ ಕಚೇರಿಯ ಆವರಣದಲ್ಲಿ ಮುಂದಿನ ವರ್ಷದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಗೋದಾಮು ನಿರ್ಮಾಣ ಮಾಡಲಾಗುತ್ತದೆ, ಸದಸ್ಯರ ನಿರಂತರ ಸಹಕಾರದಿಂದ ಸಂಘವು ಇಷ್ಟು ಎತ್ತರಕ್ಕೆ ಬೆಳೆದು ಗುರಿ ಮೀರಿ ಸಾಧನೆ ಮಾಡಲು ಸಾಧ್ಯವಾಯಿತು. ಸದಸ್ಯರ ಸಲಹೆಯಂತೆ 12% ಡಿವಿಡೆಂಡ್ ನೀಡುವುದಾಗಿ ವರಂಗ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ ಹೇಳಿದರು.

ಅವರು ಶುಕ್ರವಾರ ರಾಮ ಮಂದಿರದಲ್ಲಿ ನಡೆದ ವರಂಗ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೂನ್ಯ ಬಡ್ಡಿ ದರದಲ್ಲಿ ಸಿಗುವ ಸಾಲವನ್ನು ಈಗ ಇದ್ದ 3 ಲಕ್ಷದ ಬದಲು 5 ಲಕ್ಷ ನೀಡಲು ಸರ್ಕಾರಕ್ಕೆ ರೈತರ ಪರವಾಗಿ ಒತ್ತಾಯ ಮಾಡುತ್ತೇವೆ, ಮುಂದಿನ ವರ್ಷದಿಂದ ಸಾಲಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್, ವರಂಗ ಸಹಕಾರಿ ವ್ಯವಸಾಯಿಕ ಸಂಘ ಮತ್ತು ರೈತರು ನೀಡಿದ ಅಲ್ಪ ಮೊತ್ತದ ಪಾಲು ಹಣವನ್ನು ಒಟ್ಟು ಸೇರಿಸಿ ವಿಮಾ ಯೋಜನೆ ಜಾರಿಗೆ ತರುತ್ತೇವೆ. ಸರ್ಕಾರದ ರೈತರ ಅರೋಗ್ಯ ರಕ್ಷಣೆಗೆ ಯಶಸ್ವಿನಿ ಅರೋಗ್ಯ ರಕ್ಷಣಾ ಯೋಜನೆಯು ಬರುವ ತಿಂಗಳು ಅನುಷ್ಠಾನವಾಗುತ್ತಿದೆ. ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸಹಿತ ಎಲ್ಲರ ಸಹಕಾರದಿಂದ ಸಂಘವು ನಿರಂತರವಾಗಿ ಅಭಿವೃದ್ಧಿಯಾಗುತ್ತಿದೆ. ಇನ್ನಷ್ಟು ಜನ ಸದಸ್ಯರಾಗಿ ಸಂಘವನ್ನು ಅಭಿವೃದ್ಧಿಗೊಳಿಸಬೇಕೆಂದು ಮನವಿ ಮಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಪೈ ವಾರ್ಷಿಕ ವರದಿ ಮಂಡಿಸಿ, ವಾರ್ಷಿಕ 150 ಕೋಟಿ ರೂಪಾಯಿ ವ್ಯವಹಾರ ನಡೆಸಿ ಸುಮಾರು 40 ಲಕ್ಷ ಲಾಭ ಗಳಿಸಿದೆ ಎಂದರು.ಈ ಸಂದರ್ಭದಲ್ಲಿ 6 ಮಂದಿ ಉತ್ತಮ ಕೃಷಿಕರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಕಳ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶ್ರೀನಿವಾಸ್ ರಾವ್ ಬೆಳೆ ಸಮೀಕ್ಷೆ, ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ, ಕೊಳೆರೋಗ, ಕಾರ್ಮಿಕರ ವಿಮಾ ಯೋಜನೆ, ವಿವಿಧ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.ಸಂಘದ ಉಪಾಧ್ಯಕ್ಷ ಲಕ್ಷ್ಮಣ ಆಚಾರ್ಯ, ನಿರ್ದೇಶಕರಾದ ಅಕ್ಷಯ್ ಕುಮಾರ್, ರವಿ ಪೂಜಾರಿ, ಶುಭದರ ಶೆಟ್ಟಿ, ಕೃಷ್ಣ ಆಚಾರ್ಯ, ಸುಧನ್ವ ಪಾಣರ, ಉದಯ ನಾಯ್ಕ್, ಸನತ್ ಕುಮಾರ್, ಉಷಾ ಎಂ ಹೆಬ್ಬಾರ್, ಹೇಮಾವತಿ, ಗಣಪತಿ ಮುದ್ರಾಡಿ, ಜಗದೀಶ ಹೆಗ್ಡೆ ಉಪಸ್ಥಿತರಿದ್ದರು. ಗಣಪತಿ ಎಂ. ಸ್ವಾಗತಿಸಿ, ರಾಘವ ವಂದಿಸಿದರು.

Edited By : PublicNext Desk
Kshetra Samachara

Kshetra Samachara

24/09/2022 09:19 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ