ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಹವಾಮಾನ ಆಧಾರಿತ ಕೃಷಿ ಲಾಭಕ್ಕೆ ಪೂರಕ - ಡಾ.ಸುದೀರ್ ಕಾಮತ್

ಬ್ರಹ್ಮಾವರ : ಹವಾಮಾನ ಆಧಾರಿತ ಕೃಷಿಯಿಂದ ರೈತರು ಲಾಭವನ್ನು ಕಂಡುಕೊಳ್ಳಬಹುದು ರೈತರು ತೆಂಗು, ಅಡಕೆ , ಭತ್ತ, ಬಾಳೆ, ತರಕಾರಿ ಬೆಳೆಸಿ ಯಾವುದೇ ರಸಗೊಬ್ಬರ ಹಾಕಿದರೂ ಹವಾಮಾನದ ವೈಪರಿತ್ಯದಿಂದ ಬೆಳೆಗೆ ಹಾನಿಯಾಗುತ್ತದೆ ಹವಾಮಾನ ಆಧಾರಿತ ಕೃಷಿಯನ್ನು ಅಳವಡಿಸಿಕೊಂಡು ಏನೆ ಬೆಳೆದರೂ ಲಾಭವನ್ನು ಕಾಣಬಹುದು ಎಂದು ಬ್ರಹ್ಮಾವರ ವಲಯ ಕೃಷಿ ಸಂಶೋಧಕ ಡಾ, ಸುಧೀರ್ ಕಾಮತ್ ಹೇಳಿದರು.

ಬಂಡೀಮಠದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಗ್ರಾಮೀಣ ಕೃಷಿ ಹವಾಮಾನ ಸೇವಾ ಯೋಜನೆ, ಮುಖ್ಯ ಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ ಬ್ರಹ್ಮಾವರ ಇವರ ವತಿಯಿಂದ ಜರುಗಿದ ಹವಾಮಾನ ಕುರಿತ ರೈತ ಜಾಗೃತಿ ಮತ್ತು ಮುಖ್ಯ ಮಂತ್ರಿಗಳ ನೈಸರ್ಗಿಕ ಕೃಷಿ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹನೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ, ಸಿ.ಆರ್.ಪಿ ಲಕ್ಷ್ಮಣ ನಾಯ್ಕ್ ಉಪಸ್ಥಿತರಿದ್ದರು.

ಡಾ.ಸಂತೋಷ ಗೌಡ, ಡಾ.ಮಹಾಂತೇಶ್ ಡಾ

ಶಿವಕುಮಾರ್, ಸ್ವಾತಿ ಶೆಟ್ಟಿ, ಅಶ್ವಿನೀ ಪಾಟೀಲ್, ಪ್ರಥ್ವಿರಾಜ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಉಡುಪಿ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್ ತರಕಾರಿ ಬೀಜ ವಿತರಿಸಿದರು. ಪ್ರಗತಿಪರ ಕೃಷಿಕ ರವೀಂದ್ರನಾಥ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

Edited By :
Kshetra Samachara

Kshetra Samachara

24/09/2022 01:56 pm

Cinque Terre

2.5 K

Cinque Terre

0

ಸಂಬಂಧಿತ ಸುದ್ದಿ