ಉಡುಪಿ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಈ ವರ್ಷ ಜೂನ್ 20 ಆದರೂ ಮಳೆ ಬಾರದೇ ರೈತರು ಆಕಾಶ ನೋಡುತ್ತಿದ್ದರು. ಸದ್ಯ ಉಡುಪಿ ಜಿಲ್ಲೆಯಾದ್ಯಂತ ದಿನವಿಡೀ ಉತ್ತಮ ಮಳೆ ಸುರಿಯುತ್ತಿದ್ದು ರೈತರು ಸಂತಸಗೊಂಡಿದ್ದಾರೆ.
ಕರೆ ಹಳ್ಳ ನದಿಗಳು ತುಂಬಿಕೊಂಡಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಗದ್ದೆಯಲ್ಲಿ ಟ್ರಾಕ್ಟರ್ ಟಿಲ್ಲರ್ ಸದ್ದು ಕೇಳಿಸುತ್ತಿದೆ. ಭತ್ತದ ಬೇಸಾಯಕ್ಕೆ ತಡವಾಗಿಯಾರೂ ಜೋರಾಗಿ ತಯಾರಿ ನಡೆಯುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಒಟ್ಟು ಐದು ದಿನಗಳ ಕಾಲ ಧಾರಾಕಾರ ಮಳೆ ಸುರಿಯಲಿದೆ. ಅರಬ್ಬೀ ಸಮುದ್ರ ಈಗಾಗಲೇ ಪ್ರಕ್ಷುಬ್ಧಗೊಂಡಿದ್ದು, ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಯಾಂತ್ರೀಕೃತ ಆಳ ಸಮುದ್ರ ಮೀನುಗಾರಿಕೆ ಈಗಾಗಲೇ ಸ್ಥಗಿತಗೊಂಡಿದ್ದು, ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತಿದೆ.
Kshetra Samachara
23/06/2022 03:40 pm