ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಕೈ ಹಿಡಿದ ಕಲ್ಲಂಗಡಿ : ಕೃಷಿಕ ಶೇಖರ್ ಸಾಲ್ಯಾನ್ ಅವರ ಕೃಷಿ ಪ್ರಪಂಚ

ಕಾಪು: ಸಮರ್ಪಕ ಬೀಜದ ಕೊರತೆ, ಬಿರು ಬಿಸಿಲಿನಿಂದ ಒಣಗಿ ಹೋದ ತರಕಾರಿ ಗದ್ದೆ, ನವಿಲು, ಹೆಗ್ಗಣ ಮತ್ತು ಹಂದಿಗಳ ಕಾಟದ ನಡುವೆಯೂ ಛಲದೊಂದಿಗೆ ಕೃಷಿ ಕಾಯಕದಲ್ಲಿ ನಿರತರಾಗಿರುವ ಪ್ರಗತಿಪರ ಕೃಷಿಕ ಶೇಖರ್ ಸಾಲ್ಯಾನ್ ಅವರ ಮೊಗದಲ್ಲಿ ಕಲ್ಲಂಗಡಿ ಹಣ್ಣು ಮತ್ತೆ ನಗು ತರಿಸಿದೆ.

ಕಾಪು ಪಡುಗ್ರಾಮದ ಹಿರಿಯ ಮತ್ತು ಪ್ರಗತಿಪರ ಕೃಷಿಕರಾಗಿರುವ ಶೇಖರ್ ಸಾಲ್ಯಾನ್ ಪ್ರತೀ ವರ್ಷ ಭತ್ತದ ಬೆಳೆಯನ್ನು ಬೆಳೆದು, ಬಳಿಕ ವಾಣಿಜ್ಯ ಬೆಳೆಗಳ ಜೊತೆಗೆ ಕಲ್ಲಂಗಡಿ, ಸೌತೆಕಾಯಿ ಸಹಿತ ವಿವಿಧ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಬೆಳೆಸಿಕೊಂಡು ಲಾಭದಾಯಕ ಕೃಷಿ ಕಾರ್ಯ ನಡೆಸುತ್ತಿದ್ದರು.

ಆದರೆ ಈ ಬಾರಿ ಪ್ರತಿಕೂಲ ವಾತಾವರಣದಿಂದಾಗಿ ಇತರೆಲ್ಲಾ ಬೆಳೆಗಳು ಕೈಕೊಟ್ಟಿದ್ದರೂ ಕಲ್ಲಂಗಡಿ ಹಣ್ಣು ಮತ್ತು ಸೌತೆ ಕಾಯಿ ಬೆಳೆ ಮಾತ್ರಾ ಭರ್ಜರಿ ಇಳುವರಿಯೊಂದಿಗೆ ಶೇಖರ್ ಸಾಲ್ಯಾನ್ ಅವರ ಕೈ ಹಿಡಿದಿದೆ.ಕಲ್ಲಂಗಡಿ ಬೆಳೆಯ ಇಳುವರಿಯನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡದೇ ಮನೆಯಲ್ಲೇ ಮಾರಾಟ ಮಾಡುವ ಮೂಲಕ, ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಗ್ರಾಹಕರಿಗೆ ಪೂರೈಸುತ್ತಿದ್ದಾರೆ.

ತನ್ನ ಕೃಷಿ ಕಾರ್ಯಕ್ಕೆ ಪತ್ನಿ, ಮಕ್ಕಳು ಕೂಡಾ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೃಷಿ ಕಾರ್ಯವನ್ನು ಶ್ರದ್ಧೆಯಿಂದ ನಡೆಸಿದರೆ ಖಂಡಿತವಾಗಿಯೂ ಲಾಭದಾಯವಾಗಿದ್ದು ಯುವಕರು ಹೆಚ್ಚು ಹೆಚ್ಚಾಗಿ ಕೃಷಿ ಕಾರ್ಯದತ್ತ ಒಲವು ತೋರಿಸಬೇಕಿದೆ ಎನ್ನುತ್ತಾರೆ ಶೇಖರ್ ಸಾಲ್ಯಾನ್.

Edited By : Manjunath H D
Kshetra Samachara

Kshetra Samachara

08/04/2022 10:41 pm

Cinque Terre

12.55 K

Cinque Terre

0

ಸಂಬಂಧಿತ ಸುದ್ದಿ