ಮುಲ್ಕಿ: ಮುಲ್ಕಿ ಸಮೀಪದ ಕೋಲ್ನಾಡ್ ವಿನಲ್ಲಿ ನಡೆಯುತ್ತಿರುವ ಕೃಷಿ ಮೇಳ ಕೃಷಿಸಿರಿ 2022 ರ ಮೊದಲ ವಿಚಾರಗೋಷ್ಠಿಯಲ್ಲಿ "ವಿಷಮುಕ್ತ ಆಹಾರ" ವಿಚಾರದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಅಡ್ಡೂರು ಕೃಷ್ಣ ರಾವ್ ಮಾತಾಡಿ ನಾವು ತಿನ್ನುವ ಆಹಾರದಲ್ಲಿ ಬೇಕಾಬಿಟ್ಟಿ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಡಿಡಿಟಿಯಂತಹ ವಿಷಕಾರಿ ರಾಸಾಯನಿಕದಿಂದ ಕೃಷಿ ನಾಶವಾಗುತ್ತಿದೆ. ಮಕ್ಕಳಿಗೆ ಆಹಾರ ಸಿಗದಂತಾಗುವ ಮುನ್ನ ನಾವೆಲ್ಲರೂ ಸಾವಯವ ಸಾಕ್ಷರರಾಗೋಣ" ಎಂದು ಕರೆ ನೀಡಿದರು.
ಡಾ ಹರೀಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕೃಷಿ ಸಿರಿ ಗೋಷ್ಠಿಯಲ್ಲಿ ಚಂದ್ರಹಾಸ ಕುಂದರ್, ಪಡುಪಣಂಬೂರು ಗ್ರಾಪಂ ಸದಸ್ಯ ಹೇಮನಾಥ ಅಮೀನ್, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.
Kshetra Samachara
11/03/2022 12:30 pm