ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ʼಪಿಂಗಾರʼ ದಿಂದ ಅಡಿಕೆ ಕೊಯ್ಲು-ಸಿಂಪಡಣೆ ಪಡೆ!; ಶೀಘ್ರ ಕಾರ್ಯಾಚರಣೆ

ವಿಟ್ಲ: ಐದು ವರ್ಷದಿಂದ ವಿಟ್ಲದಲ್ಲಿ ಕಾರ್ಯವೆಸಗುತ್ತಿರುವ ʼಪಿಂಗಾರʼ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿ ಈಗ ಅಡಿಕೆ ಕೃಷಿಕರಿಗೆ ಹೊಸದೊಂದು ಸೇವೆ ಒದಗಿಸಲು ಸಜ್ಜಾಗುತ್ತಿದ್ದು, ಕಂಪೆನಿಯೇ ಯುವಕರಿಗೆ ತರಬೇತಿ ಕೊಟ್ಟು ಅಡಿಕೆ ಕೊಯ್ಲು, ಸಿಂಪಡಣೆ ನಡೆಸುವ ತಂಡ ರಚಿಸುವ ನಿರ್ಧಾರ ಮಾಡಿದೆ ಎಂದು ಕಂಪೆನಿ ಅಧ್ಯಕ್ಷ ರಾಮಕಿಶೋರ್ ಮಂಚಿ ತಿಳಿಸಿದ್ದಾರೆ.

ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಚಟುವಟಿಕೆಗೆ ಒಂದು ಸಂಸ್ಥೆ ಮುಂದಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿದೆ. ಈ ಉದ್ದೇಶಕ್ಕಾಗಿಯೇ ʼಪಿಂಗಾರʼ ನಿಕಟ ಭವಿಷ್ಯದಲ್ಲಿ ವಿಟ್ಲ ಆಸುಪಾಸಿನಲ್ಲಿ ಫೈಬರ್ ದೋಟಿ ಮೂಲಕ ಕೊಯ್ಲು- ಸಿಂಪಡಣೆ ತರಬೇತಿ ಶಿಬಿರ ನಡೆಸಲಿದೆ. ಈ ತರಬೇತಿಗೆ ಕ್ಯಾಂಪ್ಕೋ ಅಡಿಕೆ ಕೌಶಲ್ಯ ಪಡೆ ಮತ್ತು ನುರಿತ ತರಬೇತಿದಾರರ ಸಹಕಾರ ಸಿಗಲಿದೆ.

20ರಷ್ಟು ಆಸಕ್ತ ಸ್ಥಳೀಯ ಯುವಕರಿಗೆ ತರಬೇತಿ ಕೊಡುವುದು ಈ ಯೋಜನೆಯ ಮೊದಲ ಹಂತ. ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಆಯ್ಕೆ ನಡೆಸಿ ಎಂಟು ಮಂದಿಯ ತಂಡ ರಚನೆ ಅನಂತರದ ಹೆಜ್ಜೆಯಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಅವಶ್ಯಕತೆ ಇರುವಲ್ಲಿಗೆ ಜಾಬ್ ವರ್ಕ್ ಆಧಾರದ ಮೇಲೆ ಈ ತಂಡವನ್ನು ಕೊಯ್ಲು- ಸಿಂಪಡಣೆಗೆ ಕಳಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ರಾಜಾರಾಮ ಸಿ.ಜಿ. ಬಲಿಪಗುಳಿ, ಪುಷ್ಪಾ ಎಸ್. ಕಾಮತ್ ಮಂಚಿ, ರಮೇಶ್ ಎನ್. ಮಂಚಿ, ಕೃಷ್ಣ ಮೂರ್ತಿ ಕೆ. ಕೇಪು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಎಸ್. ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

24/01/2022 03:11 pm

Cinque Terre

11.17 K

Cinque Terre

0

ಸಂಬಂಧಿತ ಸುದ್ದಿ