ಮುಲ್ಕಿ: ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿ ವತಿಯಿಂದ ಅಣಬೆ ಬೇಸಾಯ ಗ್ರಾಮೀಣ ತರಬೇತಿ ಕೇಂದ್ರಕ್ಕೆ ಕೆಂಚನಕೆರೆಯಲ್ಲಿ ಚಾಲನೆ ನೀಡಲಾಯಿತು.
ರೋಟರಿ ಮಾಜೀ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘಟನೆಗಳು ವಿವಿಧ ರೀತಿಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ಯುವಜನಾಂಗವನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಘಟನೆ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಮಾತನಾಡಿ ಶ್ರೀರಾಮ ಸೇವಾ ಮಂಡಳಿ ಮೂಲಕ ಇನ್ನಷ್ಟು ಸಾಮಾಜಿಕ ಕೈಂಕರ್ಯಗಳು ನಡೆಯಲಿದೆ, ತರಬೇತಿ ಪಡೆಯಲು 9845669276 (ಮೊಬೈಲ್ ನಂಬರ್)ನ್ನು ಸಂಪರ್ಕಿಸಬಹುದು ಎಂದರು.
ಕಿಲ್ಪಾಡಿ ಪಂಚಾಯತ್ ಸದಸ್ಯ ವಿಕಾಸ್ ಶೆಟ್ಟಿ ಮತ್ತು ಮಂಡಳಿಯ ಸದಸ್ಯರುಗಳಾದ ಕೇಶವ್ ಸುವರ್ಣ, ಶಿವಾನಂದ,ಗಣೇಶ್ ಭಂಡಾರಿ, ಅಶೋಕ್ ಶೆಟ್ಟಿಗಾರ್ ಹಾಗೂ ಹರೀಶ್ ಉಪಸ್ಥಿತರಿದ್ದರು.
Kshetra Samachara
31/12/2021 02:53 pm