ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಅಡಿಕೆಗೆ ಬಂಪರ್ ಬೆಲೆಯಿದ್ದರೂ ಕೃಷಿಕನ ಖುಷಿ ಕಸಿದ ರೋಗಬಾಧೆ!

ಸುಳ್ಯ: ಕರಾವಳಿ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಇದೀಗ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ. 190-200ರ ಆಸುಪಾಸಿನಲ್ಲಿದ್ದ ಅಡಿಕೆ ಇದೀಗ ಮಾರುಕಟ್ಟೆಯಲ್ಲಿ 500 ರೂ.ಗಿಂತಲೂ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಒಂದು ಕಾಲದಲ್ಲಿ ಅಡಿಕೆ ಬಿಟ್ಟು ರಬ್ಬರ್ ಕೃಷಿಯತ್ತ ವಾಲಿದ್ದವರು ಮತ್ತೆ ತಮ್ಮ ಜಮೀನುಗಳಲ್ಲಿ ಅಡಿಕೆ ಗಿಡ ನೆಟ್ಟು, ಇನ್ನಷ್ಟು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಅವರೆಲ್ಲ ಈಗ ಅಡಿಕೆಗೆ ಕಾಡುತ್ತಿರುವ ಹಳದಿ ರೋಗದಿಂದಾಗಿ ಕಂಗೆಟ್ಟಿದ್ದಾರೆ.

ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು , ಮರ್ಕಂಜ ಪ್ರದೇಶದಲ್ಲಿ ಈಗ ಹಳದಿ ಎಲೆ ರೋಗ ಹೆಚ್ಚು ಹರಡಿದೆ. ಹೀಗಾಗಿ ಅಡಿಕೆ ಬೆಳೆಗಾರರ ಶೇ.90 ರಷ್ಟು ತೋಟಗಳು ನಾಶವಾಗಿದೆ. ಪರ್ಯಾಯ ದಾರಿಯೂ ಇಲ್ಲವಾಗಿದೆ. ಇಡೀ ರಾಜ್ಯದಲ್ಲಿ 14,000 ಹೆಕ್ಟೇರ್‌ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ ಎನ್ನುವುದನ್ನು ದಾಖಲೆ ತಿಳಿಸಿದೆ!

ದ.ಕ. ಜಿಲ್ಲೆಯಲ್ಲಿಯೇ 1700 ಹೆಕ್ಟೇರ್‌ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ ಎನ್ನುವುದು ಈಗಿನ ಲೆಕ್ಕಾಚಾರ. ಸಂಪಾಜೆಯಲ್ಲಿ 2013ರ ವೇಳೆಗೆ 750 ಕ್ವಿಂಟಾಲ್ ಅಡಿಕೆ ಕ್ಯಾಂಪ್ಕೋ ಶಾಖೆಗೆ ಬರುತ್ತಿದ್ದ ದಾಖಲೆಯೂ ಇದೆ. ಆದರೆ, ಇದೀಗ ಪ್ರಮಾಣ 350 ಕ್ವಿಂಟಾಲ್‌ ಗೆ ತಲುಪಿರುವುದು ರೋಗದ ಭೀಕರತೆ, ವಿಸ್ತರಣೆಯ ಪ್ರಭಾವ ತಿಳಿಸುತ್ತದೆ.

ಲಕ್ಷಾಂತರ ರೂ.ನ ಬೆಳೆ ಪಡೆಯುತ್ತಿದ್ದ ಕುಟುಂಬಗಳಿಗೆ ಇದೀಗ 10 ಸಾವಿರ ಸಿಕ್ಕರೆ ಅದೇ ಪುಣ್ಯ ಎಂಬಂತಾಗಿದೆ. ಅಡಿಕೆ ನೆಚ್ಚಿ ಮನೆ ಕಟ್ಟಲು ಹೊರಟ ಹಲವು ಕುಟುಂಬಗಳಿಗೆ ಮನೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹತ್ತಾರು ಕಾರ್ಮಿಕರಿಗೆ ಕೆಲಸ ನೀಡುತ್ತಿದ್ದ ಬೆಳೆಗಾರ ಇದೀಗ ಸ್ವಂತ ದುಡಿದರೂ ದಿನದ ಖರ್ಚಿಗೆ ಸಾಕಾಗುತ್ತಿಲ್ಲ!

Edited By : Manjunath H D
Kshetra Samachara

Kshetra Samachara

19/12/2021 12:17 pm

Cinque Terre

6.09 K

Cinque Terre

1

ಸಂಬಂಧಿತ ಸುದ್ದಿ