ಮುಲ್ಕಿ: ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ನಿರಂತರ ಅಕಾಲಿಕ ಮಳೆ ಬರುತ್ತಿರುವುದರಿಂದ ಕಿನ್ನಿಗೋಳಿ ಪರಿಸರದಲ್ಲಿ ಅಪಾರ ಕೃಷಿ ಹಾನಿಯಾಗಿದೆ.
ಕಿನ್ನಿಗೋಳಿ ಪ್ರದೇಶದ ಭತ್ತದ ಗದ್ದೆಗಳು ಕಟಾವಿಗೆ ಬಂದಿದ್ದು, ಹಲವಾರು ಗದ್ದೆಗಳು ಕಟಾವಿಗೆ ಬಾಕಿಯಿದೆ. ಕಟಾವು ಆದ ಭತ್ತದ ಗದ್ದೆಗಳಲ್ಲಿ ಮಳೆಯಿಂದ ಬೈಹುಲ್ಲು ಒದ್ದೆಯಾಗಿರುವುದರಿಂದ ಕಟ್ಟು ಕಟ್ಟಲು ಬಾಕಿ ಉಳಿದಿದೆ.
ಪ್ರತಿದಿನ ಸಂಜೆ, ರಾತ್ರಿ ಹೊತ್ತು ಮಳೆ ನಿರಂತರ ಬರುತ್ತಿರುವುದರಿಂದ ಗದ್ದೆಯಲ್ಲಿ ಮಳೆನೀರು ನಿಂತು, ಬೈ ಹುಲ್ಲು ಕೊಳೆಯಲಾರಂಬಿಸಿರುವುದರಿಂದ ರೈತರಿಗೆ ಇನ್ನಷ್ಟು ನಷ್ಟ ಉಂಟಾಗಿದೆ. ಆದ್ದರಿಂದ
ಜಿಲ್ಲಾಡಳಿತ, ಕೃಷಿ ಇಲಾಖೆ ರೈತರಿಗೆ ಪರಿಹಾರ ಒದಗಿಸುವಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
Kshetra Samachara
06/11/2021 08:24 pm