ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಕೃಷಿ ಬದುಕಿನ ಜೀವನಾಡಿಯಾಗಬೇಕು: ಉಮಾನಾಥ್ ಕೋಟ್ಯಾನ್

ಮುಲ್ಕಿ: ಕೃಷಿ ಬದುಕಿನಲ್ಲಿ ಸಾಂಪ್ರದಾಯಕವಾಗಿ ರೂಡಿಸಿಕೊಂಡು ಕೃಷಿ ಪರಂಪರೆ ಬೆಳೆಸುವ ಯತ್ನ ಆಗಬೇಕು, ಕೃಷಿ ಬಗ್ಗೆ ಯಾವುದೇ ತಾತ್ಸಾರ ವ್ಯಕ್ತಪಡಿಸದೆ ಬದುಕಿನಲ್ಲಿ ನಿರಂತರವಾಗಲಿ ಎಂದು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು

ಅವರು ಮುಲ್ಕಿ ಸಮೀಪದ ಬೆಳ್ಳಾಯರು ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಮುಂದಿನ ಜನವರಿ 14ರಿಂದ 16ರವರೆಗೆ ನಡೆಯಲಿರುವ ರಾಜ್ಯಮಟ್ಟದ ಕೃಷಿ ಮೇಳ 2022ರ ಲಾಂಛನ ಬಿಡುಗಡೆ ಹಾಗೂ ಸಮ್ಮೇಳನದ ಹೆಸರು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನದ ಕೃಷಿಸಿರಿ-2022 ಹಾಗೂ ನೂತನ ಲಾಂಛನ ಬಿಡುಗಡೆ ಮಾಡಲಾಯಿತು.

ಪ್ರಣವ ಕೋ-ಆಪರೇಟಿವ್ ಸೊಸೈಟಿಯ ಜೆ.ಆರ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು 21 ಸಮಿತಿಗಳನ್ನು ರಚನೆ ಮಾಡಲಾಗಿದೆ. ಸುಮಾರು ಮೂರೂವರೆ ಎಕರೆ ಜಾಗದಲ್ಲಿ ಕೃಷಿ ಬಗ್ಗೆ ಹಿಂದಿನ ಕಾಲದ ಕಲ್ಪನೆಗಳನ್ನು ಮೂಡಿಸುವ ಉಪಕರಣಗಳು ಸಹಿತ ಸಾವಯವ ಕೃಷಿಗೆ ಒತ್ತು ನೀಡುವ ಬಗ್ಗೆ ಮಾಹಿತಿಗಳನ್ನು ನೀಡಲಾಗುವುದು ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿನಯ ಬೆಳೆಗಾರರ ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ, ಕಮಿಟಿಯ ಪದಾಧಿಕಾರಿಗಳಾದ ಜೆ ಆರ್ ಪ್ರಸಾದ್, ಅಣ್ಣಯ್ಯ ಕುಲಾಲ್, ರತ್ನಾಕರ್, ವಸಂತ್ ಕುಮಾರ್, ಇಂಜಿನಿಯರ್ ಜೀವನ ಶೆಟ್ಟಿ ಕಾರ್ನಾಡ್, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಕೊಲ್ನಾಡು ರಾಮಚಂದ್ರ ನಾಯಕ್, ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಕೃಷಿ ಅಧಿಕಾರಿ ಬಶೀರ್ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

31/10/2021 07:52 pm

Cinque Terre

26.88 K

Cinque Terre

1

ಸಂಬಂಧಿತ ಸುದ್ದಿ