ಕಡೆಕಾರ್ : ಉಡುಪಿ ಶಾಸಕ ರಘುಪತಿ ಭಟ್ ಅವರ ಕನಸಿನ ಹಡಿಲು ಭೂಮಿ ಕೃಷಿ ಆಂದೋಲನದಡಿ ನಾಟಿ ಮಾಡಿದ ಗದ್ದೆಗಳಲ್ಲಿ ಭತ್ತದ ಫಸಲು ಬೆಳೆದು ನಿಂತಿದೆ.ಇದೀಗ ಕಟಾವಿನ ಸಮಯ. ಈ ಹಿನ್ನೆಲೆಯಲ್ಲಿ ಕಡೆಕಾರ್ ಗ್ರಾಮದ ಗದ್ದೆಯಲ್ಲಿ ಬೆಳೆಯ ಕಟಾವು ಕಾರ್ಯವನ್ನು ಶಾಸಕ ಕೆ ರಘುಪತಿ ಭಟ್ ವೀಕ್ಷಿಸಿ ಖುಷಿಪಟ್ಟರು.ಈ ಮೊದಲು ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಡಿಲು ಭೂಮಿ ಕೃಷಿ ಅಂದೋಲನದಡಿ ಉಡುಪಿಯಲ್ಲಿ ಸುಮಾರು 1500 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿತ್ತು. ಶಾಸಕರ ಈ ಆಂದೋಲನಕ್ಕೆ ರಾಜಕೀಯ ಮುಖಂಡರಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಕೈ ಜೋಡಿಸಿದ್ದರು.
ಇವತ್ತಿನ ಕಟಾವು ಸಂದರ್ಭದಲ್ಲಿ ಉಡುಪಿ ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯರಾದ ವಿನೋದಿನಿ, ಅಂಬಲಪಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಉಮೇಶ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/10/2021 05:14 pm