ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಪ್ರಥಮ ಬಾರಿಗೆ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನಿಂದ 2021-22ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್‌ಗೆ ಗ್ರಾ ಪಂ. ಅಧ್ಯಕ್ಷ ಮನೋಹರ ಕೋಟ್ಯಾನ್ ಚಾಲನೆ ನೀಡಿದರು.
ಈ ಸಂದರ್ಭ ಅವರು ಮಾತನಾಡಿ ಮೊಬೈಲ್ ಆಪ್ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಪ್ರಾಕೃತಿಕ ವಿಕೋಪದಿಂದ ಆಗುವ ನಷ್ಟದ ಬೆಳೆಯ ಪ್ರಮಾಣವನ್ನು ಕುಳಿತಲ್ಲಿಂದಲೇ ಪರಿಶೀಲಿಸಬಹುದು ಎಂದರು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಗೀತಾ, ಜಯಕುಮಾರ್, ದಯಾನಂದ, ಗ್ರಾಮ ಕರಣಿಕರಾದ ಸುನೀಲ್ ಕುಮಾರ್ ಹೆಚ್ ಎಸ್ . ಉಪಸ್ಥಿತರಿದ್ದರು. ಕೃಷಿ ಅಧಿಕಾರಿಗಳಾದ ಅಬ್ದುಲ್ ಬಶೀರ್ ಮತ್ತು ಷಣ್ಮುಗ ಆ್ಯಪ್ ಬಗ್ಗೆ ಮಾಹಿತಿಯನ್ನು ನೀಡಿದರು ಮತ್ತು ಕೃಷಿಕರ ಜಮೀನುಗಳಿಗೆ ಭೇಟಿ ನೀಡಿ ಆ್ಯಪ್ ಬಗ್ಗೆ ಮಾಹಿತಿಯನ್ನು ನೀಡಿದರು.
Kshetra Samachara
21/08/2021 04:04 pm