ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಯುವಜನತೆ ಕೃಷಿಗೆ ಪ್ರೋತ್ಸಾಹ ಶ್ಲಾಘನೀಯ

ಮುಲ್ಕಿ: ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ,ಕ್ರೀಡಾ ಇಲಾಖೆ ಮಂಗಳೂರು ಸಹಯೋಗದಲ್ಲಿ ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಲು ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೇ ತೋಕೂರು ಗ್ರಾಮದ ಪುಲಾಯಿ ಗುತ್ತು ದುರ್ಗಾಪ್ರಸಾದ್ ರವರ ಹಡೀಲು ಗದ್ದೆಯಲ್ಲಿ ಭತ್ತದ ನೇಜಿ ನೆಡುವ ಕಾರ್ಯಕ್ರಮ ನಡೆಯಿತು.

ಈ ಕಾರ್ಯದಲ್ಲಿ ಪಂಚಾಯತ್ ಸದಸ್ಯರಾದ ಹೇಮನಾಥ ಅಮೀನ್ ಮಾತನಾಡಿ ಯುವಜನತೆ ಕೃಷಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರೋತ್ಸಾಹ ಶ್ಲಾಘ ನೀಯ ಎಂದರು.

ಮಂಡಳಿಯ ಗೌರವಾಧ್ಯಕ್ಷರಾದ ಧನಂಜಯ್ ಪಿ ಶೆಟ್ಟಿಗಾರ್, ಅಧ್ಯಕ್ಷರಾದ ಯಜ್ಞೆಶ್ ಪಿ ಶೆಟ್ಟಿಗಾರ್, ಕಾರ್ಯದರ್ಶಿ ಧನು ಅಂಚನ್ ಹಾಗೂ ಮಂಡಳಿಯ ಸದಸ್ಯರು ಕೃಷಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Edited By : Nirmala Aralikatti
Kshetra Samachara

Kshetra Samachara

14/08/2021 11:05 pm

Cinque Terre

4.25 K

Cinque Terre

0

ಸಂಬಂಧಿತ ಸುದ್ದಿ